ಉದಯವಾಹಿನಿ, ಕೋಲಾರ: ನೀತಿ-ಸಂಹಿತೆ ಹೆಸರಿನಲ್ಲಿ ಮನೆ ಮೇಲೆ ಕಟ್ಟಿದ್ದ ಕೇಸರಿ ಬಾವುಟ ಹಾಗೂ ವಿವಿಧೆಡೆ ಹಾಕಿದ್ದ ಶ್ರೀರಾಮನ ಫ್ಲೆಕ್ಸ್‌ಗಳನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಕಿತ್ತು ಸ್ಮಶಾನದಲ್ಲಿ ಎಸೆದಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಹಡಗಲ್ನಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಘಟನೆ ಖಂಡಿಸಿ ಕೆಲ ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಪಿಡಿಒ ಹಿಜಾಜ್ ಪಾಷ ಕೋಮು ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ದಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿ ಬಾವುಟಗಳನ್ನೆಲ್ಲ ಸ್ಥಳಾಂತರಿಸಿದ್ದಾರೆ. ಈ ದುಷ್ಕøತ್ಯ ಎಸಗಿರುವ ಅಧಿಕಾರಿಯನ್ನು ಕೂಡಲೇ ಬಂಧಿಸಬೇಕು ಮತ್ತು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!