ಉದಯವಾಹಿನಿ, ಬೆಂಗಳೂರು: ಮರೆಯಲಾಗದ ಮಾಣಿಕ್ಯ,ಕನ್ನಡಿಗರ ರತ್ನ ಪುನಿತ್ ರಾಜಕುಮಾರ್ ಅವರ 49 ನೇ ವರ್ಷದ ಹುಟ್ಟುಹಬ್ಬ. ನಮ್ಮನ್ನೆಲ್ಲ ಅಗಲಿ ಮೂರು ವರ್ಷಗಳೇ ಕಳೆದು ಹೋದವು. ದೇಶದಲ್ಲಿ ಅನೇಕ ಗಣ್ಯರು ಅಗಲಿದಾಗ ಕಂಬನಿ ಮಿಡಿದು ಸ್ವಲ್ಪ ದಿನ, ತಿಂಗಳಗಳವರೆಗೂ ನೆನದು ಮರೆತುಬಿಡುತ್ತಾರೆ. ಆದರೆ ಕನ್ನಡಿಗರ ಪ್ರೀತಿಯ ಮಗ ಅಪ್ಪು ವಿಷಯದಲ್ಲಿ ಅದು ಹಾಗಾಗಲಿಲ್ಲ. ಅಗಲಿ ಮೂರು ವರ್ಷವಾದರೂ ಇಂದಿಗೂ ಪ್ರತಿದಿನ ಕಂಬನಿ ಮಿಡಿಯುವವರಿದ್ದಾರೆ.
ಪ್ರತಿಯೊಂದು ಮನೆಯಲ್ಲಿ ತಮ್ಮ ಮನೆ ಮಗನ ಜನ್ಮ ದಿನವನ್ನು ಆಚರಿಸುವ ಹಾಗೆ ಕೇಕ್ ಕಟ್ ಮಾಡುವ ಮೂಲಕ ಪ್ರೀತಿ ವಾತ್ಸಲ್ಯ ತೋರಿ ಕಣ್ಣೀರು ಹಾಕುತಿದ್ದಾರೆ. ಅಭಿಮಾನಿಗಳಲ್ಲಿ ಅವರನ್ನು ಕಳೆದುಕೊಂಡ ನೋವು ಮಾತ್ರ ಕಡಿಮೆಯಾಗಿಲ್ಲ. ಅನೇಕ ಮನೆಗಳ ದೇವರ ಮನೆಯಲ್ಲಿ ಪೂಜ್ಯನೀಯ ಸ್ಥಾನ ಪಡೆದಿದ್ದಾರೆ.

ಪ್ರತೀ ಜಾತ್ರೆ ತೇರುಗಳ ಮೇಲೆ ದೇವರ ಬಳಿ ಇವರ ಭಾವಚಿತ್ರಕ್ಕೆ ಪೂಜಿಸಲಾಗುತ್ತಿದೆ. ಆಡಿಯೋ, ಟೈಟಲ, ಟ್ರೈಲರ್, ಟೀಸರ್ ಯಾವುದೇ ಸಿನಿಮಾ ಕಾರ್ಯಕ್ರಮಗಳಿದ್ದರೂ ಮೊದಲು ಪುನೀತ್ ಅವರನ್ನು ನೆನೆದು ಮುಂದಿನ ಕಾರ್ಯಕ್ರಮ ಶುರು ಮಾಡುವ ಪದ್ಧತಿ ಅಗಲಿ ಮೂರು ವರ್ಷವಾದರೂ ಇಂದಿಗೂ ಗಾಂಧಿನಗರದಲ್ಲಿ ನಡೆದುಕೊಳ್ಳುತ್ತಾ ಬಂದಿದೆ. ಬಿಡುಗಡೆಯಾಗುವ ಪ್ರತೀ ಚಿತ್ರದಲ್ಲಿ ಮೊದಲಿಗೆ ಅಭಿಮಾನದ ನುಡಿಗಳನ್ನು ಬರೆಯಲಾಗಿರುತ್ತದೆ. ಅಷ್ಟರಮಟ್ಟಿಗೆ ಗಾಂನಗರ ಅಪ್ಪು ಅವರನ್ನು ನೆನಪುಗಳ ಮೂಲಕ ಜೀವಂತವಾಗಿರಿಸಿದೆ.

ಇಂದು ಹಳ್ಳಿ, ಪಟ್ಟಣ, ನಗರಗಳ ಮೂಲೆಮೂಲೆಗಳಲ್ಲೂ ಪುನೀತ್ ರಾಜಕುಮಾರ್ ಭಾವಚಿತ್ರಗಳ ದೊಡ್ಡ ದೊಡ್ಡ ಕಟೌಟ್‍ಗಳು ಹೂವುಗಳಿಂದ ಅಲಂಕೃತಗೊಂಡು ರಾರಾಜಿಸುತ್ತಿವೆ. ಪುನೀತ್ ಸಮಾಯ ಬಳಿ ಸಾವಿರಾರು ಅಭಿಮಾನಿಗಳು ಕೈಯಲ್ಲಿ ಕೇಕುಗಳನ್ನು ಹಿಡಿದು ತಂಡೋಪ ತಂಡವಾಗಿ ಬಂದು ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಎದೆ ಭಾರ ಮಾಡಿಕೊಂಡು ಆಚರಿಸುತ್ತ, ಜೈ ಅಪ್ಪು, ಅಪ್ಪು ಅಮರ,ಅಪ್ಪು ಮತ್ತೆ ಹುಟ್ಟಿ ಬಾ ಘೋಷಣೆಗಳನ್ನು ಕೂಗುತ್ತಾ ಮತ್ತೊಮ್ಮೆ ಸಮಾಯ ದರ್ಶನವನ್ನು ಮಾಡುತ್ತಾ ಕಣ್ಣೀರು ಸುರಿಸುತ್ತಾ ಸಾಗುತ್ತಿದ್ದಾರೆ. ಇಂದೂ ಕೂಡ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಮಂದಿ ಸಮಾಯ ಬಳಿ ಬಂದು ದರ್ಶನ ಮಾಡುವ ಮೂಲಕ ಹುಟ್ಟು ಹಬ್ಬಕ್ಕೆ ಶುಭ ಹಾರೈಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!