ಉದಯವಾಹಿನಿ, ರಾಮನಗರ: ತಾಲೂಕಿನ ಸುಗ್ಗನಹಳ್ಳಿಯ ಸರ್ವೇ ನಂ.೭೧ ಮತ್ತು ೭೪ರಲ್ಲಿ ಕಲ್ಲುಗಣಿಗಾರಿಕೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿ ವಜಾಗೋಳಿಸಬೇಕು. ಕಲ್ಲುಗಣಿಗಾರಿಕೆ ನಡೆಸಲು ತಹಸೀಲ್ದಾರ್ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಸುಗ್ಗನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಜಯಶ್ರೀ ಮತ್ತು ಡಿ.ಸಿ.ಕುಮಾರ್ ಎಂಬುವವರು ಅರ್ಜಿ ಸಲ್ಲಿಸಿದ್ದು, ಅರ್ಜಿಗೆ ಸಂಭಂದಿಸಿದಂತೆ ರಾಜಸ್ವ ನಿರೀಕ್ಷಕ ಮತ್ತು ಗ್ರಾಮಲೆಕ್ಕಾಧಿಕಾರಿ ಗ್ರಾಮಸ್ಥರನ್ನು ಮತ್ತು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡದೇ ಅಥವಾ ಮಾಹಿತಿ ಪಡೆಯದೆ ಅನುಮತಿಸಲು ಹೊರಟಿದ್ದಾರೆ. ಗಣಿಗಾರಿಕೆಗೆ ಅನುಮತಿಸಿರುವ ಸ್ಥಳದಲ್ಲಿ ದರೆ ಅರಣ್ಯ ಪ್ರದೇಶ, ವನ್ಯ ಪ್ರಾಣಿಗಳ ವಾಸ, ಸನಿಹದಲ್ಲೇ ಅರ್ಕಾವತಿ ನದಿ, ಚೆಕ್ ಡ್ಯಾಂ, ನೀರಾವರಿ ಪ್ರದೇಶ, ವಾಸದ ಮನೆಗಳಿದ್ದರೂ ಅವೆಲ್ಲವನ್ನೂ ಮರೆಮಾಚಿ ಗಣಿಗಾರಿಕೆಗೆ ಪೂರಕವಾಗುವಂತೆ ತಹಸೀಲ್ದಾರ್‌ಗೆ ವರದಿ ಸಲ್ಲಿಸಿದ್ದಾರೆ. ಈ ವರದಿಗಳನ್ನು ನೈಜವಾಗಿ ಪರಿಶೀಲಿಸಿ ಜನರ ಪ್ರಾಣಕ್ಕೆ ಕುಂದು ತುರುವುದನ್ನ ತಪ್ಪಿಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಎಸ್.ಆರ್. ರಾಮಕೃಷ್ಣಯ್ಯ, ಲೋಕೇಶ್, ಎಸ್.ಜಿ.ಆರ್. ರವಿ, ಲೋಕೇಶ್, ಆರ್ ಸುರೇಶ್, ಮುತ್ತು, ಚಿಕ್ಕಸ್ವಾಮಿ, ರೇಣುಕಪ್ಪ, ಭೈರಯ್ಯ, ಸುರೇಶ್, ಜೈಕುಮಾರ್, ನಾಗೇಶ್, ಶಿವಾನಂದ, ರಾಜಣ್ಣ ಇದ್ದರು
