ಉದಯವಾಹಿನಿ, ಮೈಸೂರು: ನಗರದ ಗೋಕುಲಂನ ಶಿವರುದ್ರಮ್ಮ ಟ್ರಸ್ಟ್‍ನ ವಿವಾಹ ಶಾಗಲೆಯಲ್ಲಿ ಮಾನವ ಮಂಟಪದ ಆಶ್ರಯದಲ್ಲಿ ರೇಣುಕಾ ಮತ್ತು ಯಮನೂರಪ್ಪ ಅವರ ಸರಳ ಮಂತ್ರಮಾಂಗಲ್ಯ ನೆರವೇರಿತು.
ಗದಗ್ ಜಿಲ್ಲೆಯ ರೋಣ ತಾಲ್ಲೂಕಿನ ಸವಡಿ ಗ್ರಾಮದ ಪಾರವ್ವ ಮತ್ತು ರುದ್ರೇಗೌಡ ಅರಹುಣಸಿ ದಂಪತಿಯ ಪುತ್ರಿ ರೇಣುಕಾ ಮತ್ತು ಜಕ್ಕಮ್ಮ ಮತ್ತು ಭೀಮಪ್ಪ ಈಳಿಗೇರ ದಂಪತಿಯ ಪುತ್ರ ಯಮನೂರಪ್ಪ ಪರಸ್ಪರ ಪ್ರೀತಿಸಿ ಕುವೆಂಪು ಅವರ ಮಂತ್ರಮಾಂಗಲ್ಯದ ವಿಧಾನದಂತೆ ಮದುವೆಯಾದರು.
ಬೆಂಗಳೂರು ಶೇಶಾದ್ರಿಪುರಂ ಪೆÇಲೀಸ್ ಠಾಣೆಯಲ್ಲಿ ಪೆÇಲೀಸ್ ಪೇದೆಯಾಗಿರುವ ರೇಣುಕಾ ಮತ್ತು ಪಶುವೈದ್ಯ ಇಲಾಖೆಯಲ್ಲಿ ಇನ್‍ಸ್ಪೆಕ್ಟರ್ ಆಗಿರುವ ಯಮನೂರಪ್ಪ ಅವರು ಕಳೆದ ಹತ್ತು ವರ್ಷಗಳ ಹಿಂದೆ ಪಿಯುಸಿ ಓದುವಾಗ ಸಹಪಾಠಿಗಳಾಗಿದ್ದು ಪರಸ್ಪರ ಪ್ರೀತಿಸಿದ್ದರು.
ಅನ್ಯ ಜಾತಿ ಕಾರಣದಿಂದ ಕುಟುಂಬ ಇವರ ಮದುವೆಗೆ ನಿರಾಕರಿಸಿತ್ತು. ಮಾನವ ಮಂಟಪದ ಆಶ್ರಯದಲ್ಲಿ ಮದುವೆಯಾಗಲು ನಿರ್ಧರಿಸಿದ್ದರಿಂದ ಇಂದು ಅವರ ಆಶಯದಂತೆ ವಿವಾಹ ಜರುಗಿತು. ಪೆÇ್ರ.ವೆಂ. ವನಜಾ, ನ್ಯಾಯಾಂಗ ಇಲಾಖೆಯ ಶಿರಸ್ತೆದಾರರಾದ ಬಿ.ಎಸ್.ಪೂರ್ಣಿಮಾ, ಮೈಸೂರು ಪರಿಸರ ಬಳಗದ ಭಾಗ್ಯ ಶಂಕರ್, ಅಂಜನಾ ಹಾಗೂ ಶೇಶಾದ್ರಿಪುರಂ ಪೆÇಲೀಸ್ ಠಾಣೆಯ ಸಿಬ್ಬಂದಿ ಸಂಗಮೇಶ್ ಮತ್ತು ಸ್ನೇಹಿತರಾದ ದೇವರಾಜು, ಜಯರಾಜು, ಕಾವ್ಯ ಮಧು, ಶಿವರಾಜು ಅವರು ಈ ಸಂದರ್ಭದಲ್ಲಿ ಮಾತನಾಡಿ ವಧುವರರಿಗೆ ಶುಭ ಕೋರಿದರು.
ಖ್ಯಾತ ಗಾಯಕರಾದ ದೇವಾನಂದ ವರಪ್ರಸಾದ್ ಮತ್ತು ನಾರಾಯಣ ಸ್ವಾಮಿ ತಂಡದಿಂದ ಗೀತಗಾಯನ ಜರಿಗಿತು.
ಮಾನವ ಮಂಟಪದ ಪೆÇ್ತ.ಕೆ.ಕಾಳಚನ್ನೇಗೌಡ ವಧುವವರಿಗೆ ವಿವಾಹ ಪ್ರಮಾಣ ವಚನ ಬೋಧಿಸಿದರು.
