ಉದಯವಾಹಿನಿ,ರಾಯಚೂರು: ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕೆಂದು ಸುಪ್ರೀಂ ಕೋರ್ಟ್ ನ್ಯಾಯವಾದಿ ಕೆ. ದೇವಣ್ಣ ನಾಯಕ ಅವರು ಕರೆ ನೀಡಿದರು.
ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜನ ಸೇವಾ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಫ್ಯಾಷನ್ ಶೋ ಮತ್ತು ಮನೋರಂಜನೆ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿ ವರ್ಷ ಒಂದೇ ದಿನ ಆಚರಣೆ ಮಾಡಿ ಬಿಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಪ್ರತಿ ದಿನಾಲು ಚಿಂತನೆ ದಿನಾಚರಣೆ ಮಹಿಳಾರಿಂದ ನಡೆದಾಗ ಮಹಿಳೆಯರ ಮುಂದೆ ಬರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವದುರ್ಗ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀದೇವಿ ಆರ್. ನಾಯಕ್ ಅವರು ಮಾತನಾಡಿ. ಎಲ್ಲಾ ರಂಗಗಳಲ್ಲಿಯೂ ಮಹಿಳೆಯರಿಗೆ ಸಮರ್ಪಕವಾಗಿ ಮೀಸಲಾತಿ ದೊರಕಿದಾಗ ಮಾತ್ರ ಮುಂದೆ ಬರಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಕಿಲ್ಲೆ ಬ್ರಹ್ಮ ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಮಹಾಸ್ವಾಮಿಗಳು ವಹಿಸಿ ಆಶ್ರವಚನ ನೀಡಿದರು.
ವೇದಿಕೆ ಮೇಲೆ ಜನ ಸೇವಾಚಾರ್ಯ ಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಜಾವಿದ್ ಖಾನ್, ರಿಮ್ಸ್ ಹಿರಿಯ ದಂತ ವೈದ್ಯರು ಮತ್ತು ಸ್ಥಾನಿಕ ವೈದಧಿಕಾರಿಗಳು ನೂಡಲ್ ಅಧಿಕಾರಿ ಡಾ. ಶಾಮಣ್ಣ ಮಾಚನೂರು, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಡಾ. ನಾಗವೇಣಿ ಎಸ್ ಪಾಟೀಲ್, ಗಣ್ಯರಾದ ಎಚ್ ಜಗದೀಶ್ ವಕೀಲರು, ಈರಮ್ಮ ವಕೀಲರು, ಡಾಕ್ಟರ್ ಮಹಾಲಿಂಗಪ್ಪ ಮಾಲಿ ಪಾಟೀಲ್, ಮಾಲಾ ಭಜಂತ್ರಿ, ಸರಸ್ವತಿ ತಿಡಿಗೋಳ್, ಶಿವಮೊಗ್ಗ ಜಂತಕಲ್, ಜೆ ಯು ಹುಡೇದ, ಎಂ ವಸಂತ್, ಲಲಿತಾ, ರವೀಂದ್ರನಾಥ್ ಸೇರಿದಂತೆ ಇತರ ಹಾಜರಿದ್ದರು ಈ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧರಂಗಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ನಂತರ ಫ್ಯಾಶನ್ ಶೋ ಹಾಗೂ ಜೂನಿಯರ್ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮಗಳು ಜರಗಿದವು. ಚಲನಚಿತ್ರ ನಿರ್ಮಾಪಕ ಸಿದ್ದೇಶ್ ವಿರುಕ್ತಮಠ್ ಅವರು ನಿರೂಪಿಸಿದರು, ನರಸಿಂಹಲು ಅವರು ವಂದಿಸಿದರು.

 

Leave a Reply

Your email address will not be published. Required fields are marked *

error: Content is protected !!