ಉದಯವಾಹಿನಿ, ಸಿರವಾರ : ತಾಲೂಕಿನ ನವಲಕಲ್ ಬೃಹನ್ಮಠದ ಲಿಂ.ಶ್ರೀ. ಷ.ಬ್ರ.ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ೨೭ ನೇ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಭಾನುವಾರ ಅದ್ದೂರಿಯಾಗಿ ಮಠಧ್ಯಾಕ್ಷರಾದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವದಲ್ಲಿ ಜರುಗಿತು. ಸಂಜೆ ಗ್ರಾಮದ ವಿವಿಧ ವಾರ್ಡಗಳಲ್ಲಿ ಪಲ್ಲಕಿ ಸೇವೆ ಜರುಗಿತು. ಡೊಳ್ಳು, ಬಾಜ,ಭಜನೆ ಸಕಲ ವಾದ್ಯಗಳ ಮೂಲಕ, ಕುಂಭ, ಕಳಸದೊಂದಿಗೆ ಭಕ್ತರ ಜಯ ಘೋಷದೊಂದಿಗೆ ರಥೋತ್ಸವ ಜರಗಿದರೆ, ರಥಕ್ಕೆ ಉತ್ತುತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸಲ್ಲಿಸಿದರು.
ಸಂದರ್ಭದಲ್ಲಿ ವಿವಿಧ ಮಠದ ಪೂಜ್ಯರು, ರಾಜಕೀಯ ನಾಯಕರು ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!