ಉದಯವಾಹಿನಿ, ನವಲಗುಂದ:  ಪ್ರತಿ ವರ್ಷದಂತೇ ಈ ವರ್ಷವು ಪಟ್ಟಣದ ಶ್ರೀ ರಾಮಲಿಂಗ ಕಾಮದೇವರ ಹೋಳಿ ಹಬ್ಬದ ಕಾರ್ಯಕ್ರಮ ಮಾರ್ಚ 20 ಬುಧವಾರ ಏಕಾದಶಿ ರಾತ್ರಿ ಪ್ರತಿಷ್ಠಾಪನೇ ಪ್ರಾರಂಭಗೊಂಡು ದ್ವಾದಶಿ ಬೆಳಿಗ್ಗೆ ಗುರುವಾರ ಕಾಮದೇವರ ಪ್ರತಿಷ್ಠಾಪನೆ ಪೂರ್ಣಗೊಂಡು ದರ್ಶನಕ್ಕೆ ಲಭ್ಯವಾಗಲಿದೆ ಎಂದು ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಯಲ್ಲಪ್ಪ ಭೋವಿ ತಿಳಿಸಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮಾ. 25 ರಂದು ಸೋಮವಾರ ದಿವಸ ಹೋಳಿ ಹುಣ್ಣಿವೆಯನ್ನು ಆಚರಿಸಲಾಗುವುದು. 26 ರಂದು ಮಂಗಳವಾರ ದಿವಸ ಬಣ್ಣದಾಟ (ಓಕುಳಿ) ಅದೇ ದಿನ ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೇರವಣಿಗೆ ನಂತರ ಕಾಮದಹನದೊಂದಿಗೆ ಹೋಳಿ ಹಬ್ಬದ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ ಎಂದರು.
ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಭಕ್ತಾದಿಗಳು ಸರತಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆಯ ಬಹುದಾಗಿದೆ ಎಂದು ತಿಳಿಸಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಣದ ಎಲ್ಲ ಓಣಿಯ ಹಿರಿಯರು.ಯುವಕರು ಮಹಾ ಪ್ರಸಾದ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬರುವ ಭಕ್ತರಿಗೆಲ್ಲರಿಗೂ ಸಕಲ ಸೌಲಭ್ಯಗಳನ್ನು ಒದಗಿಸಲು ಸಹಕರಿಸಬೇಕೆಂದರು.
ಹಿರಿಯರಾದ ಎನ್.ಪಿ.ಕುಲಕರ್ಣಿ, ಶಶಿಧರ ಭರತಭೋಜನಮಠ, ಮಲ್ಲಿಕಾರ್ಜುನ ಜಲಾದಿ, ಚನ್ನಪ್ಪಗೌಡ ಪಾಟೀಲ, ಬಾಬಣ್ಣ ಗಾಯಕವಾಡ, ನಾಗಪ್ಪ ಭೋವಿ ಸೇರಿದಂತೆ ರಾಮಲಿಂಗ ಟ್ರಸ್ಟ್ ಕಮೀಟಿ ಸದಸ್ಯರು ಓಣಿಯ ಹಿರಿಯರು ಯುವಕರು ಪತ್ರಿಕಾಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!