ಉದಯವಾಹಿನಿ, ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಸರ್ಕಾರದ ಮಹತ್ವಪೂರ್ಣ ಯೋಜನೆ ಭಾರತ್ ರೈಸ್ ವಿತರಿಸುವ ಕಾರ್ಯಕ್ರಮಕ್ಕೆ ನಿಕಟಪೂರ್ವ ಬಿಬಿಎಂಪಿ ಸದಸ್ಯರು, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಕೆ.ಉಮೇಶ್ ಶೆಟ್ಟಿರವರು ಭಾರತ್ ರೈಸ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಕೆ.ಉಮೇಶ್ ಶೆಟ್ಟಿರವರು ಬಡವರು ಮತ್ತು ಮಧ್ಯಮ ವರ್ಗದವರು ಹಸಿವಿನಿಂದ ಬಳಲಬಾರದು ಎಂದು ಬಿಪಿಎಲ್ ಕಾರ್ಡ್‌ದಾರರಿಗೆ ೫ ಕೆ.ಜಿ.ಅಕ್ಕಿ ಉಚಿತ ಮತ್ತು ಇನ್ನಿತರೆ ಜನರಿಗೆ ಅನುಕೂಲವಾಗಲಿ ಎಂದು ೧ ಕೆ.ಜಿ.ಅಕ್ಕಿಗೆ ೨೯ರೂಪಾಯಿ ನಿಗದಿ ಮಾಡಿ ಕೇಂದ್ರ ಸರ್ಕಾರ ವಿತರಿಸುತ್ತಿದೆ.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಪ್ರಧಾನಿ ನರೇಂದ್ರ ಮೋದಿರವರ ಸರ್ಕಾರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿ ತರಲು ಪಿ.ಎಂ.ವಿಶ್ವಕರ್ಮ ಯೋಜನೆ, ಉಜ್ವಲ ಯೋಜನೆ ಮುದ್ರ ಯೋಜನೆ ಮತ್ತು ಜನಜೀವನ್ ಮೀಷನ್ ೪೦ಕೋಟಿ ಮನೆಗಳಿಗೆ ನೀರಿನ ಸಂಪರ್ಕ, ಬೀದಿ ವ್ಯಾಪಾರಿಗಳಿಗೆ ಸ್ವ ನಿಧಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ, ಪ್ರಧಾನ್ ಮಂತ್ರಿ ಅವಾಸ್ ಯೋಜನೆಯಲ್ಲಿ ಕೊಟ್ಯಂತರ ಮನೆಗಳ ನಿರ್ಮಾಣ ಮಾಡಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್, ಜನೌಷಧಿ ಕೇಂದ್ರಗಳು ಸ್ಥಾಪನೆಯಾಗಿ ಜನರ ಆರೋಗ್ಯ ಸುರಕ್ಷತೆ ಗಮನಹರಿಸಲಾಗಿದೆ.
೫೦೦ವರ್ಷಗಳ ಸತತ ಹೋರಾಟದ ಫಲ ಪ್ರಧಾನಿ ನರೇಂದ್ರಮೋದಿರವರ ಸಾರಥ್ಯದಲ್ಲಿ ಅಯೋಧ್ಯೆ ಭವ್ಯ ಶ್ರೀರಾಮಮಂದಿರ ಲೋಕಾರ್ಪಣೆ. ಕೊರೊನಾ ಸಂದರ್ಭದಲ್ಲಿ ಇಡಿ ವಿಶ್ವವೆ ತಲ್ಲಣಗೊಂಡಿತ್ತು ಅದರೆ ಪ್ರಧಾನಿ ನರೇಂದ್ರಮೋದಿರವರ ದಿಟ್ಟತನದಿಂದ ದೇಶದ ಜನರಿಗೆ ಉಚಿತವಾಗಿ ವಾಕ್ಸಿನ್ ಮತ್ತು ೮೦ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ವಿತರಿಸಿದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯ ರಾಮಪ್ಪ, ಬಿಜೆಪಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಡೊಡ್ಡಯ್ಯ, ಬಿಜೆಪಿ ಮುಖಂಡರುಗಳಾದ ನಂಜಪ್ಪ, ಶಾಮಣ್ಣ, ಮಂಜು, ಜಯದೇವ್, ಚಲುವಚಾರ್ ರವರು ಭಾಗವಹಿಸಿದ್ದರು.

ನಗರದ ಗೋವಿಂದ ರಾಜ ಕ್ಷೇತ್ರದ ಬಿಜೆಪಿ ಕಚೇರಿ ಮುಂಭಾಗ ಮಾಜಿ ಪಾಲಿಕೆ ಸದಸ್ಯ ಕೆ. ಉಮೇಶ್ ಶೆಟ್ಟಿರವರು ಜನರಿಗೆ ಭಾರತ್ ರೈಸ್‌ಅನ್ನು ವಿತರಣೆ ಮಾಡಿದರು. ಮಾಜಿ ಪಾಲಿಕೆ ಸದಸ್ಯ ರಾಮಪ್ಪ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ದೊಡ್ಡಯ್ಯ, ಬಿಜೆಪಿ ಮುಖಂಡರುಗಳಾದ ನಂಜಪ್ಪ, ಶಾಮಣ್ಣ, ಮಂಜು, ಜಯದೇವ್, ಚಲುವಚಾರ್ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!