ಉದಯವಾಹಿನಿ, ಕೊಟ್ಟೂರು : ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಶೌಚಾಲಯದಲ್ಲಿ ಪುರುಷರು ಮುಜುಗರದಿಂದ ಮೂತ್ರ ವಿಸರ್ಜನೆ ಮಾಡುತ್ತ,ಸಂಬಂಧ ಪಟ್ಟ ಅಧಿಕಾರಿಗಳಿಗೆ ಇಡೀ ಶಾಪ ಹಾಕುವ ದೃಶ್ಯ ನಿತ್ಯ ಇಲ್ಲಿ ಸರ್ವೇಸಾಮಾನ್ಯವಾಗಿದೆ.
ಮೂತ್ರ ವಿಸರ್ಜನೆ ಮಾಡುವಲ್ಲಿ, ತಡೆಗೋಡೆಗಳು ಹಾಳಾಗಿ ಬಹುದಿನಗಳೇ ಕಳೆದಿವೆ, ಇಲ್ಲಿನ ವಾಸನೆಗೆ ಜನರು ಬೇಸತ್ತು ಹೋಗಿದ್ದಾರೆ ಆದರೆ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ
ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಡೆಗೋಡೆಗಳು ಹಾಳಾಗಿರುವ ಹಿನ್ನೆಲೆ ಮೂತ್ರ ವಿಸರ್ಜನೆ ಮಾಡುವಾಗ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುವಂತವರ ಮೂತ್ರಗಳು ಸಿಡಿಯುತ್ತವೆ ಎಂಬ ಕಾರಣಕ್ಕೆ ಹಾಗೂ ಮುಜುಗರದಿಂದ ಕೆಲವರು ಬಹು ಸಮಯದವರೆಗೆ ಕಾದು ಪಕ್ಕದಲ್ಲಿ ಯಾರು ಇಲ್ಲದಿದ್ದ ವೇಳೆ ಮಾತ್ರ ವಿಸರ್ಜನೆ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ.
