ಉದಯವಾಹಿನಿ, ಕೂಡ್ಲಿಗಿ : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿಸಂಹಿತೆ ಜಾರಿಯಾಗಿದ್ದು ಕೂಡ್ಲಿಗಿ 96ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗಡಿಭಾಗಕ್ಕೆ ಸಂಬಂಧಿಸಿದಂತೆ ಚೆಕ್ ಪೋಸ್ಟ್ ತೆರೆಯಲಾಗಿದ್ದು ಗುಡೇಕೋಟೆ ಭಾಗದ ವ್ಯಾಪ್ತಿಯಲ್ಲಿ ಡಿ ಸಿದ್ದಾಪುರ ಸಮೀಪದ ಚೆಕ್ ಪೋಸ್ಟ್ ನಲ್ಲಿ ಗುರುವಾರ ನಡೆಸಿದ ವಾಹನಗಳ ತಪಾಸಣೆ ವೇಳೆ ಎರಡು ವಾಹನದಲ್ಲಿ ನಗದು ಹಣ ಮತ್ತೊಂದು ವಾಹನದಲ್ಲಿ ನೂರಕ್ಕೂ ಅಧಿಕ ಸೀರೆಗಳ ಸಾಗಾಟಕ್ಕೆ ಸರಿಯಾದ ದಾಖಲೆ ಇಲ್ಲದೆ ಜಪ್ತಿ ಮಾಡಲಾಗಿದೆ ಎಂದು ತಿಳಿದಿದೆ. ಕೆನರಾ ಬ್ಯಾಂಕಿಗೆ ಸಂಬಂದಿಸಿದ 20ಲಕ್ಷ ರೂ ಹಣ ಮಹೇಂದ್ರ ಗೂಡ್ಸ್ ವಾಹನವೊಂದರಲ್ಲಿ ತೆಗೆದುಕೊಂಡು ಬಳ್ಳಾರಿಯಿಂದ ಇಟಗಿ ಗ್ರಾಮೀಣ ಬ್ಯಾಂಕಿಗೆ ತೆಗೆದುಕೊಂಡು ಹೋಗುವಾಗ ಚೆಕ್ ಪೋಸ್ಟ್ ಸಿಬ್ಬಂದಿ ತಪಾಸಣೆ ವೇಳೆ ಸಿಕ್ಕಿದ್ದು ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿ ಸ್ಥಳಕ್ಕೆ ಧಾವಿಸಿದ ಕೂಡ್ಲಿಗಿ ಡಿವೈ ಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ, ಕೂಡ್ಲಿಗಿ ಸಿಪಿಐ ವಿನಾಯಕ ಹಾಗೂ ಗುಡೇಕೋಟೆ ಪಿಎಸ್ಐ ಅರುಣ್ ಕುಮಾರ ರಾಥೋಡ್ ಸೇರಿದಂತೆ ಗುಡೇಕೋಟೆ ಕೂಡ್ಲಿಗಿ ಸಿಬ್ಬಂದಿ ಪರಿಶೀಲನೆ ನಡೆಸಿ ಹಣ ಸಾಗಾಟದ ವಾಹನದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದೆ ಇದ್ದುದರಿಂದ ಅನುಮಾನಗೊಂಡು ಐಟಿ ಅಧಿಕಾರಿಗಳ ಗಮನಕ್ಕೆ ತರಲಾಗಿ ಪರಿಶೀಲನೆ ನಡೆಸಿದ ಐಟಿ ಅಧಿಕಾರಿಗಳು ಕೆನರಾ ಬ್ಯಾಂಕಿನ ಹಣವೆಂದು ರುಜುವಾತು ಮಾಡಿದ್ದಾರೆಂದು ಹೇಳಲಾಗಿದ್ದು ವಾಹನ ಹಣವನ್ನು ಬಿಟ್ಟು ಕಳುಹಿಸಿರುವ ಬಗ್ಗೆ ತಿಳಿದಿದೆ.
