ರಾಮನಗರ: ಮಾಗಡಿಯ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ‌‌.
ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ಎಂಜಿನಿಯರಿಂಗ್ ವಿದ್ಯಾರ್ಥಿನಿ ನೀಲಾಂಬಿಕೆ ಹಾಗೂ ವಕೀಲ ಮಹದೇವಯ್ಯ ಬಂಧಿತರು. ಬಸವಲಿಂಗ ಶ್ರೀಗಳಿಗೂ ಹಾಗೂ ಆರೋಪಿ ಕಣ್ಣೂರು ಶ್ರೀಗಳಿಗೂ ವೈಷಮ್ಯ ಇತ್ತು. ಈ ಹಿನ್ನೆಲೆಯಲ್ಲಿ ಯುವತಿಯನ್ನು ಬಳಸಿಕೊಂಡು ಕಣ್ಣೂರು ಶ್ರೀಗಳು ಹನಿಟ್ರ್ಯಾಪ್ ಮಾಡಿಸಿದ್ದರು. ಯುವತಿಯು ಬಸವಲಿಂಗ ಸ್ವಾಮೀಜಿ ಜೊತೆ ವಿಡಿಯೊ ಚಾಟಿಂಗ್‌ ಮಾಡಿದ್ದು, ಅದನ್ನು ವಕೀಲ ಮಹದೇವಯ್ಯರಿಗೆ ನೀಡಿದ್ದರು. ಮಹದೇವಯ್ಯ ಅದನ್ನು ಸಿ.ಡಿ. ಮಾಡಿ ಮುಖಂಡರಿಗೆ ಹಂಚಿದ್ದರು ಎಂದು ಆರೋಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!