

ಉದಯ ವಾಹಿನಿ ಅರಸೀಕೆರೆ: ರಾಜ್ಯದೆಲ್ಲೆಡೆ ಖ್ಯಾತಿ ಪಡೆದು ಕಳೆದ 81 ನೆ ವರ್ಷದ ಗಣೇಶ ವಿಸರ್ಜನಾ ಮಹೋತ್ಸವಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಯಿತು 3ದಿನಗಳ ಅದ್ಧೂರಿ ಗಣೇಶೋತ್ಸವ ಸಮಾರಂಭದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಬಿಜೆಪಿ ಮುಖಂಡ ಎನ್ ಆರ್ ಸಂತೋಷ್ ನಗರಸಭಾ ಅಧ್ಯಕ್ಷರಾದ ಗಿರೀಶ್ ಹಾಗೂ ಭಕ್ತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಅರಸೀಕೆರೆ ನಗರ ಮತ್ತು ಸುತ್ತಮುತ್ತಲ ನಾಗರಿಕರು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು ಶುಕ್ರವಾರ ರಾತ್ರಿ ಮತ್ತು ಶನಿವಾರ ಇಡೀ ದಿನ ರಾತ್ರಿ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿ ಸಾರ್ವಜನಿಕರ ಮನಸೂರೆಗೊಂಡವು .ಅರಸೀಕೆರೆ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಪ್ರಸನ್ನಗಣಪತಿ ಕಳೆದ 58ದಿನಗಳಿಂದ ಪೂಜಿಸಲ್ಪಟ್ಟಿದ್ದು ಇಡೀ ನಗರಾದ್ಯಂತ ಬಣ್ಣಬಣ್ಣದ ವಿದ್ಯುತ್ ಅಲಂಕಾರ ಕೇಸರಿ ಬಂಟಿಂಗ್ಸ್ ಗಳು ಈ ಬಾರಿ ವಿಶೇಷವಾಗಿ ರಾರಾಜಿಸುತ್ತಿದ್ದವು ಅರಸೀಕೆರೆ ಪಟ್ಟಣದ ನಾಗರಿಕರು ಗಣೇಶೋತ್ಸವದ ಮೆರವಣಿಗೆಯಲ್ಲಿ ತಮ್ಮ ತಮ್ಮ ಅಂಗಡಿಗಳ ಮನೆಗಳ ಮುಂದೆ ಗಣೇಶನ ಪೂಜೆ ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು ಅಲ್ಲಲ್ಲಿ ಭಕ್ತಾದಿಗಳಿಗೆ ನಾಗರಿಕರು ಸ್ವಯಂ ಸೇವಾಸಂಸ್ಥೆಯ ಸ್ವಯಂ ಸೇವಕರು ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು ಶನಿವಾರ ರಾತ್ರಿ ಅರಸೀಕೆರೆ ಬಳಿ ಅದ್ದೂರಿ ಮದ್ದುಗುಂಡುಗಳ ಪ್ರದರ್ಶನ ಏರ್ಪಡಿಸಲಾಗಿತ್ತು ಭಾನುವಾರ ಅಂದರೆ ಇಂದು ಅರಸೀಕೆರೆಯ ಇತಿಹಾಸ ಪ್ರಸಿದ್ಧ ಅರಸೀ ಕೆರೆಯಲ್ಲಿ ಇಂದು ಮಧ್ಯಾಹ್ನ ಗಣೇಶೋತ್ಸವದ ವಿಸರ್ಜನಾ ಸಮಾರಂಭ ನಡೆಯಲಿದೆ.
ಜನಮನ ಸೆಳೆದ ಡಿಜೆ
ಮಹಾರಾಷ್ಟ್ರದ ಪುಣೆಯಿಂದ ಕರೆಸಲಾಗಿದ್ದ ಡಿಜೆ ಯುವಕ ಯುವತಿಯರ ನೃತ್ಯಕ್ಕೆ ಅರಸೀಕೆರೆಯ ನಾಗರಿಕರು ಸಂತಸ ಪಟ್ಟರು ಶನಿವಾರ ಸಂಜೆ ಡಿಜೆಯ ಹಿಂದೆಮುಂದೆ ಸಹಸ್ರಾರು ಯುವಕ ಯುವತಿಯರು ಪಾಲ್ಗೊಂಡು ಕೇಸರಿಯನ್ನು ತೊಟ್ಟು ನೃತ್ಯ ಮಾಡಿ ಸಂತಸಪಟ್ಟರು ಅನ್ಯ ಪಕ್ಷದವರು ಡಿಜೆ ಮೇಲಿದ್ದ ಎನ್ ಆರ್ ಸಂತೋಷ್ ಅವರ ಭಾವಚಿತ್ರವನ್ನು ಹಾಕಿದ್ದ ಅಭಿಮಾನಿಗಳಿಗೆ ಫ್ಲೆಕ್ಸ್ ಗಳನ್ನು ತೆಗೆಯಬೇಕೆಂದು ಒತ್ತಡ ಹೇರಿದರು ಹಾಗೂ ಕೆಲಕಾಲ ಎನ್ ಆರ್ ಸಂತೋಷ್ ಅವರ ಅಸಂಖ್ಯಾತ ಅಭಿಮಾನಿಗಳು ಮತ್ತೊಮ್ಮೆ ಎನ್ ಆರ್ ಸಂತೋಷ್ ಅವರ ಫ್ಲೆಕ್ಸ್ ಅನ್ನು ಹಾಕುವುದರ ಮೂಲಕ ತಮ್ಮ ಅಭಿ ಮಾನವನ್ನು ತೋರ್ಪಡಿಸಿದರು ಇಡಿ ಅರಸೀಕೆರೆ ನಗರ ಕೇಸರಿ ಫ್ಲೆಕ್ಸ್ ನಿಂದ ಕಂಗೊಳಿಸಿ ಈ ವರ್ಷದ ಅದ್ದೂರಿ ಗಣೇಶೋತ್ಸವಕ್ಕೆ ಅರಸೀಕೆರೆ ನಗರ ಸಾಕ್ಷಿಯಾಯಿತು.
