ಉದಯವಾಹಿನಿ, ಕನಕಪುರ : ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಲ್ಲಿನ ಲಯನ್ಸ್ ಮತ್ತು ಲಿಯೋ ಕ್ಲಬ್‌ವತಿಯಿಂದ ವಿಶಿಷ್ಠವಾಗಿ ಆಚರಿಸಲಾಯಿತು.
ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ಹೊರವಲಯದಲ್ಲಿ ಇರುವ ಕನಕ ಇಸ್ಸ್ಟಿಟ್ಯೂಟ್ ನಲ್ಲಿ ಹಿರಿಯ ಮಹಿಳೆಯರು ಗಿಡ ನೆಟ್ಟು ನೀರೆರೆಯುವ ಮೂಲಕ ಮಹಿಳಾ ದಿನಾಚರೆಯ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು.
೨೦೨೪ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಮೂಲ ಉದ್ದೇಶವಾದ ಮಹಿಳೆಯರು ಹೂಡಿಕೆ ಮಾಡಿ ವಿಚಾರವಾಗಿ ದೇಶದ ಪ್ರಗತಿಯತ್ತ ಮಹಿಳೆಯರ ಚಿತ್ತ ಹರಿಸುವ ಮೂಲಕ ಆರ್ಥಿಕ ದುರ್ಬಲತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಳಾಗಿದೆ ಎಂದು ಜಿಲ್ಲಾ ಗಿಡನೆಡುವ ಕಾರ್‍ಯಕ್ರಮ ಅಧ್ಯಕ್ಷ ಮರಸಪ್ಪ ರವಿ ಹೇಳಿದ್ದಾರೆ.
ಕನಕ ಇನ್ಸ್ಟಿಟ್ಯೂಟ್ ಆವರಣದಲ್ಲಿ ನೆಲ್ಲಿಕಾಯಿ ಗಿಡನೆಟ್ಟು ಬೆಳೆಸುವ ರೀತಿಯಲ್ಲಿ ಸಮಾಜದಲ್ಲಿ ಲಿಂಗತಾರಮ್ಯ ಹೋಗಬೇಕು, ಲಿಂಗ ಸಮಾನತೆ ಏರ್ಪಡಬೇಕು, ಪರಿಸರ ಸ್ನೇಹಿ ಮಹಿಳಾ ದಿನಾವರಣೆಯನ್ನು ನಾವು ಆಚರಿಸಿದ್ದೇವೆಂದು ತಿಳಿಸಿದರು.
ಪ್ರಪಂಚದಲ್ಲಿ ತಾಪಮಾನ ಹೆಚ್ಚಾಗುತ್ತಿದೆ ಇದಕ್ಕೆ ಹಸಿರುಮನೆಯ ವಾತಾವರಣ ಕ್ಷೀಣಿಸಿರುವುದೇ ಕಾರಣವಾಗಿದೆ ಆ ನಿಟ್ಟಿನಲ್ಲಿ ಮಹಿಳೆಯರು ತಮ್ಮ ತಮ್ಮ ಮನೆಗಳ ಮುಂದೆ ಗಿಡನೆಟ್ಟು ಪೋಷಣೆ ಮಾಡಿದರೆ ಸಮಾಜದ ಪ್ರಗತಿಗೆ ಕಾರಣವಾಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನು ವಿಜಯ, ರತ್ನ ವಿಣಾ, ರಾಣಿ, ಅನಿತಾ ಲತಾ, ಎನ್.ಭಾಗ್ಯ, ಅಂಬಿಕಾ, ಸೇರಿದಂತೆ ಅನೇಕ ಮಹಿಳೆಯರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!