ಉದಯವಾಹಿನಿ, ಆನೇಕಲ್ : ಜೆಪಿನಗರದಲ್ಲಿ ಡಾ.ಮಾನಸ ರವರ ಮಾಲೀಕತ್ವದಲ್ಲಿ ನೂತನವಾಗಿ ಪ್ರಾರಂಭಗೊಂಡ ಆಯುರ್ ನಿಧಿ ಪಂಚ ಕರ್ಮ ಮತ್ತು ವೆಲ್ ನೆಸ್ ಸೆಂಟರ್ ಗೆ ಕೆ.ಎನ್.ಫೌಂಡೇಷನ್ ಅಧ್ಯಕ್ಷ ರಾಜ್ ಕೃಷ್ಣಮೂರ್ತಿ ರವರು ಚಾಲನೆ ನೀಡಿ ಶುಭ ಹಾರೈಸಿದರು.
ಈ ವೇಳೆ ಕೆ.ಎನ್. ಫೌಂಡೇಷನ್ ಅಧ್ಯಕ್ಷ ರಾಜ್ ಕೃಷ್ಣಮೂರ್ತಿ ಮಾತನಾಡಿ ಡಾ ಮಾನಸಳಿಗೆ ಇರುವ ಪ್ರತಿಭೆಗೆ ಹೊರ ದೇಶಕ್ಕೆ ಹೋಗಿ ಒಳ್ಳೆ ಹಣ ಸಂಪಾದನೆ ಮಾಡ ಬಹುದಿತ್ತು ಆದರೆ ಡಾ ಮಾನಸ ರವರು ತಮಗೆ ಜನ್ಮ ಕೊಟ್ಟ ಭೂಮಿಗೆ ತಮ್ಮ ಬಡಾವಣೆಯ ಜನರ ಸೇವೆಯನ್ನು ಮಾಡಬೇಕು ಎಂಬುವ ಉದ್ದೇಶದಿಂದ ಆಯುರ್ ನಿಧಿ ಪಂಚ ಕರ್ಮ ಮತ್ತು ವೆಲ್ ನೆಸ್ ಸೆಂಟರ್ ಪ್ರಾರಂಭಿಸಿದ್ದಾರೆ ಎಂದರು. ಸಮಾಜಕ್ಕೆ ಮಾದರಿ ಡಾ ಮಾನಸ ರವರು ಮುಂದಿನ ದಿನಗಳಲ್ಲಿ ಕೆ.ಎನ್.ಫೌಂಡೇಷನ್ ಮತ್ತು ಡಾ|| ಮಾನಸ ರವರ ಸಹಯೋಗದಲ್ಲಿ ಕರ್ನಾಟಕ ಹಲವು ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಭಿರಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
