ಉದಯವಾಹಿನಿ, ಶಹಾಪುರ: ತಾಲೂಕಿನ ಸುಕ್ಷೇತ್ರ ಮೂಡಬೂಳ ಗ್ರಾಮದಲ್ಲಿ ಕಡಕೋಳ ಮಡಿವಾಳೇಶ್ವರ ಶಾಖಾ ಮಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಆಚರಿಸಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಡಕೋಳ ಮಡಿವಾಳೇಶ್ವರ ಮಠದ ಪೀಠಾಧಿಪತಿಗಳಾದ ರುದ್ರಮುನಿ ಶಿವಾಚಾರ್ಯರು ಮನುಕುಲದ ಉದ್ಧಾರಕ್ಕಾಗಿ ಈ ಭುವಿಗೆ ಅವತರಿಸಿದವರೆ ಜಗದ್ಗುರು ರೇಣುಕಾಚಾರ್ಯರು. ಜೀವಿ ಶಿವನಾಗುವ ಮಾನವ ಮಹದೇವನಾಗುವ ಅಂಗ ಲಿಂಗವಾಗುವ ಅದ್ಭುತ ಸಿದ್ದಾಂತವನ್ನು ಜಗತ್ತಿಗೆ ಬೋಧಿಸಿದವರು. ಜಾತಿ ಮತ ಪಂಥಗಳನ್ನು ಎಣಿಸದೆ ಮಾನವ ಕುಲಕ್ಕೆ ಒಳಿತನ್ನು ಬಯಸಿದ ಪರಶಿವನ ಅವತಾರಿಗಳು ಎಂದರು. ಕಾರ್ಯಕ್ರಮದ ಸಮ್ಮುಖವನ್ನು ಶಹಾಪುರ ಏಕದಂಡಿ ಮಠದ ಕಾಳಹಸ್ತೆಂದ್ರ ಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉತ್ತರ ಕರ್ನಾಟಕದ ಕ.ರ.ವೆ ಅಧ್ಯಕ್ಷರಾದ ಶರಣು ಗದ್ದುಗೆ ಶಹಾಪುರ ಆಗಮಿಸಿದ್ದರು. ಪುರಾಣ ಪ್ರವಚನಕಾರರಾದ ಸುಂಟನೂರ ಹಿರೇಮಠದ ಬಂಡಯ್ಯ ಸ್ವಾಮೀಜಿ, ಅಣಬಿ , ಮುಡಬೂಳ ಗ್ರಾಮದ ಸದ್ಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವೀರೇಶ ಬೋರಗಿ, ತಬಲಾವಾದಕರಾದ ಪ್ರವೀಣ ಚಿಟಗುಪ್ಪ ಅವರಿಂದ ಸಂಗೀತ ಜರುಗಿತು. ಸುರೇಶ ದ್ವರಿ ಸ್ವಾಗತಿಸಿದರು. ರಕ್ಷಿತಾ ಅರವಿಂದ ರೆಡ್ಡಿ ದಾಸೋಹ ಸೇವೆ ಸಲ್ಲಿಸಿದರು.
