ಉದಯವಾಹಿನಿ, ಹುಬ್ಬಳ್ಳಿ: ಹೋಳಿ ಹಬ್ಬದ ನಿಮಿತ್ತವಾಗಿ ಕಮರಿಪೇಟ್ ಫ್ರೇಂಡ್ಸ್ ಸರ್ಕಲ್ ನಿಂದ ಮಾ.25 ರಿಂದ 29 ರವರೆಗೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಮರಿಪೇಟ್ ಫ್ರೇಂಡ್ಸ್ ಸರ್ಕಲ್ ಅಧ್ಯಕ್ಷರಾದ ಕಾಶಿನಾಥಸಾ ಖೋಡೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮರಿಪೇಟ್ ನಲ್ಲಿ ಸುಮಾರು 145 ವರ್ಷಗಳಿಂದ ಹೋಳಿ ಹಬ್ಬ ಆಚರಿಸುತ್ತಾ ಬಂದಿದ್ದು, 5 ದಿನಗಳವರೆಗೆ ಶ್ರೀ ಕಾಮಣ್ಣ ರಥಿದೇವಿ ಮೂರ್ತಿಯನ್ನು ಇಟ್ಟು 5 ದಿನಗಳವರೆಗೆ ಪೂಜಾ ಪುನಸ್ಕಾರ ಮಾಡಲಾಗುವುದೆಂದರು.
ಸೋಮವಾರ ದಿ.25 ರಂದು ಸಂಜೆ 6.30 ಕ್ಕೆ ಶ್ರೀ ಕಾಮಣ್ಣ ರಥಿದೇವಿ ಮೂರ್ತಿ ಪ್ರತಿಷ್ಠಾಪನೆ, ಮಂಗಳವಾರದಂದು ಮೆಹಂದಿ ಮತ್ತು ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಬುಧವಾರ ಅರ್ಕೆಸ್ಟ್ರಾ ಭರತ ನಾಟ್ಯ, ಡ್ಯಾನ್ಸ್ ಕಾಂಪಿಟೇಶನ್, ಮ್ಯಾಜಿಕ್ ಶೋ, ಸಾವಜಿ ಕಾಮಿಡಿ ಡ್ರಾಮಾ, ಗುರುವಾರದಂದು ಡ್ಯಾನ್ಸ್, ಕಾಮಿಡಿ
ಮೊದಲಾದ ಕಾರ್ಯಕ್ರಮಗಳು ಇರಲಿವೆ ಎಂದರು.
ಇನ್ನೂ ಮಾ.29ರಂದು ಶುಕ್ರವಾರ ಬೆ.7 ಗಂಟೆಗೆ ಶ್ರೀ ಕಾಮಣ್ಣ ರಥಿದೇವಿ ಮೂರ್ತಿಯ ಮೆರವಣಿಗೆ ಮೂಲಕ ರಂಗ ಪಂಚಮಿ ಆಚರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ ಬುರಬುರೆ, ರಮೇಶ ಮಗಜಿಗೊಂಡಿ ಮತ್ತಿತರರು ಉಪಸ್ಥಿತರಿದ್ದರು.
