
ಉದಯವಾಹಿನಿ
ವರದಿ ರವಿ ತೇಲಂಗಿ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪರೀಕ್ಷೆ ನಡೆಯುತ್ತಿರುವಾಗ ದಿನಾಂಕ 22 /3/24 ನಡೆಯಬೇಕಾದ ಬಿಕಾಂ ಐದನೇ ಸೆಮಿಸ್ಟರ್ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಪರೀಕ್ಷೆ ನಡೆಯುತ್ತಿರುವಾಗ ಯಾವ ಕಾಲೇಜಿನಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಅದು ಪ್ರಶ್ನೆ ಪತ್ರಿಕೆಯ ಜಾಲತಾಣದಲ್ಲಿ ಹರದಾಡಿದ್ದು. ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಕೋಡ್ ನಂಬರ್ 48131 ಎಂಬ ವಿಷಯ ಪ್ರಶ್ನೆ ಪತ್ರಿಕೆ ಸೋರಿಕೆ ಮೊಬೈಲ್ ನಲ್ಲಿ ಸ್ಕ್ಯಾನ್ ಪ್ರತಿಯು ಬೆಳಗ್ಗೆ 9:15ಕ್ಕೆ. ಪ್ರೊಫೆಸರ್ ಸಿ.ಎಮ್ ತ್ಯಾಗರಾಜು ಮಾನ್ಯ ಕುಲಪತಿ ಇಂದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮೊಬೈಲ್ ನಂಬರಗೆ 9448697046 ವ್ಯಾಟ್ಸಪ್ ಸಂಖ್ಯೆಗೆ ಪ್ರೊಫೆಸರ್ ಅಶೋಕ್ ಆ ಡಿಸೋಜ ಎಂ ಎಸ್ ಡಬ್ಲ್ಯೂ ವಿಭಾಗದ ಮುಖ್ಯಸ್ಥರು 903694843 ಮೊಬೈಲ್ ಸಂಖ್ಯೆಯಿಂದ 22 /3/24 ರಂದು ಬೆಳಿಗ್ಗೆ 9:15 ಮೊಬೈಲ್ ಸ್ಕ್ಯಾನ್ ಮಾಡಿದ ಪ್ರಶ್ನೆ ಪತ್ರಿಕೆ ಬಂದಿರುತ್ತದೆ ಅದನ್ನು ನನ್ನ ಮೊಬೈಲ್ ಸಂಖ್ಯೆ ಯಾದ 9480024629 ಗೆ ಫಾರ್ವರ್ಡ್ ಮಾಡಿರುತ್ತಾರೆ ತದನಂತರ ನಾನು ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಿದ ಪ್ರಶ್ನೆ ಪತ್ರಿಕೆಯನ್ನು ಹೋಲಿಸಿದಾಗ ಎರಡು ಪತ್ರಿಕೆಗಳು ಹೋಲಿಕೆಯಾಗಿರುತ್ತದೆ ವಿಶ್ವವಿದ್ಯಾಲಯದಿಂದ ಮುದ್ರಿಸಿದ ಪ್ರಶ್ನೆ ಪತ್ರಿಕೆಯ ಮೇಲೆ ಕೋಡುಗಳನ್ನು ನೀಡುತ್ತಾರೆ ಆದರೆ ಮೊಬೈಲಲ್ಲಿ ಸ್ಕ್ಯಾನ್ ಮಾಡಿದ ಪತ್ರಿಕೆಯಲ್ಲಿ ಆ ಸಂಖ್ಯೆಯನ್ನು ಮರೆಮಾಚಿರುವುದು ಕಂಡು ಬಂದಿರುತ್ತದೆ.
ರಾಣಿ ಚನ್ನಮ್ಮ ಯೂನಿವರ್ಸಿಟಿಯ ಬಿ ಕಾಮ್ 5ನೇ ಸೆಮಿಸ್ಟರ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಪರೀಕ್ಷೆ ಕೊಠಡಿಯಲ್ಲಿ ಖಂಡನಾರ್ಹ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಉತ್ತಮವಾದ ಹೆಸರನ್ನು ಹೊಂದಿರುವ ಗುಣಮಟ್ಟದ ಶಿಕ್ಷಣಕ್ಕೆ , ಉತ್ತಮ ಆಡಳಿತಾತ್ಮಕ ವ್ಯವಸ್ಥೆಗೆ ಹೆಸರುವಾಸಿಯಾಗಿದ್ದ ವಿಶ್ವವಿದ್ಯಾಲಯ. ಸೋರಿಕೆಯಂತಹ ಘಟನೆಗಳು ವಿಶ್ವವಿದ್ಯಾಲಯಕ್ಕೆ ಕಪ್ಪು ಚುಕ್ಕೆ ತರುವಂತದ್ದು. ಇದು ಸೈಬರ್ ಕ್ರೈಂ ಅಡಿಯಲ್ಲಿ ಬರುವುದರಿಂದ ಕಾಕತಿ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲು ಮಾಡಿದ್ದು ಪೊಲೀಸರು ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ನಮ್ಮ ಉದಯವಾಹಿನಿ ಪತ್ರಿಕೆ ಹೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

