ಉದಯವಾಹಿನಿ, ಶಿಡ್ಲಘಟ್ಟ: ಶ್ರೀ ಪೂಜಮ್ಮ ದೇವಿ ಕರಗ ಮಹೋತ್ಸವ ದ ಅಂಗವಾಗಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಮುರಳಿಧರ್ ಭೇಟಿ ನೀಡಿ ಪರಿಶೀಲಿಸಿದರು. ನಗರದ ಸಿದ್ದಾರ್ಥ ನಗರ ಶ್ರೀ ಪೂಜಮ್ಮ ದೇವಿ ಯವರ ಕರಗ ಮಹೋತ್ಸವವೂ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಕರಗದ ನಿಮಿತ್ತ ಇಂದು ಶ್ರೀ ಪೂಜಮ್ಮ ದೇವಾಲಯದಲ್ಲಿ ನಡೆಯುತ್ತಿರುವ ಪೂಜಾ ಕಾರ್ಯಕ್ರಮಗಳನ್ನು ವೀಕ್ಷಣೆ ನಡೆಸಿ ಮುಖಂಡರ ಜೊತೆ ಮಾತನಾಡಿ ದೇವಸ್ಥಾನದ ಹಳೆಯ ಸಂಪ್ರದಾಯ ಮತ್ತು ಪೂಜಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಮುರಳಿಧರ್, ಶಿಡ್ಲಘಟ್ಟ ಆರಕ್ಷಕ ವೃತ್ತ ನಿರೀಕ್ಷಕ ಎಂ.ಶ್ರೀನಿವಾಸ್, ನಗರ ಠಾಣೆ ಪಿಎಸ್‌ಐ ಎಂ.ವೇಣುಗೋಪಾಲ್ ಸಿಬ್ಬಂದಿಯು ಸಿದ್ದಾರ್ಥ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡುವ ಮೂಲಕ ಸಿದ್ದಾರ್ಥ ನಗರದ ನಿವಾಸಿಗಳಿಗೆ ತಾವು ಶಾಂತಿಯುತವಾಗಿ ತಮ್ಮ ಸಂಪ್ರದಾಯದಂತೆ ಹಬ್ಬವನ್ನು ಆಚರಿಸಿ ಹಾಗೂ ಶಾಂತಿ ಕಾನೂನು ವ್ಯವಸ್ಥೆ ಕಾಪಾಡುವಂತೆ ಸೂಚಿನೆ ನೀಡಿದರು.
