ಉದಯವಾಹಿನಿ, ಕೆ.ಆರ್.ಪುರ : ಬಿಜೆಪಿ ಮುಖಂಡರಾದ ಪ್ರಕೃತಿ ಬಡಾವಣೆ ಮಂಜುನಾಥ ನಗರದ ಹಲವು ಮುಖಂಡರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ. ಮೋಹನ್ ಬಾಬು ಹಾಗೂ ಕಲ್ಕೆರೆ ಕುಮಾರಣ್ಣ ನೇತೃತ್ವದಲ್ಲಿ ಕೆ.ಆರ್.ಪುರದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಸೇರ್ಪಡೆ ಮಾಡಿಕೊಂಡು ಮಾತನಾಡಿದ ಡಿ.ಕೆ. ಮೋಹನ್‌ಬಾಬು ಅವರು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಕರೆ ನೀಡಿದರು.
ಕೆ.ಆರ್.ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತಮ್ಮದೆ ಆದ ನೆಲೆಹೊಂದಿದ್ದು,ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತ ನೀಡುವ ಮೂಲಕ ಪಾರಮ್ಯ ಮತ್ತೆ ಸ್ಥಾಪಿಸಲಿದೆ ಎಂದು ನುಡಿದರು.
ಕಾಂಗ್ರೇಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಬರುವವರನ್ನು ಸ್ವಾಗತಿಸುವ ಮೂಲಕ ಉತ್ತಮ ಸ್ಥಾನಮಾನವನ್ನು ನೀಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಮುಖಂಡರೊಂದಿಗೆ ಸೇರಿ ಮುಂದಿನ ಲೋಕಸಭೆ, ಪಾಲಿಕೆ ಚುನಾವಣೆಯಲ್ಲಿ ದಿಟ್ಟ ಯೋಜನೆ ರೂಪಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲಿದ್ದೇವೆ ಎಂದು ನುಡಿದರು.
ಕಲ್ಕೆರೆ ಕುಮಾರಣ್ಣ ಹಾಗೂ ಕಾರ್ತಿಕ್ ಅವರ ನೇತೃತ್ವದಲ್ಲಿ ಬಾಬುಸಾಪಾಳ್ಯ ಪ್ರಕೃತಿ ಬಡಾವಣೆ ಸುನೀಲ್,ಸುರೇಶ್,ವಿನೋದ್,ಜಾಕೀರ್,ಅನೀಲ್ ಮಂಜುನಾಥ ನಗರ ಸೆಲ್ವಿ,ನಾಗಮ್ಮ,ವಾಣಿ,ಮಂಜುಳ, ಪ್ರಿಯಾಂಕ, ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಕಲ್ಕೆರೆ ಕುಮಾರ್, ,ಗೆದ್ದಲಹಳ್ಳಿ ಮುನಿರಾಜು, ಕ್ಯಾಲಸನಹಳ್ಳಿ ಶ್ರೀನಿವಾಸ್,ಬಂಜಾರ ಬಡಾವಣೆ ಉಷಾ,ಟಿವಿ ದಾಸರ್,ಕೆ.ಚನ್ನಸಂದ್ರ ಬಸವರಾಜ್, ಇದ್ದರು.
