ಉದಯವಾಹಿನಿ, ಶಿಡ್ಲಘಟ್ಟ : ಏಪ್ರಿಲ್ ೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿ, ಕ್ಷೇತ್ರದಲ್ಲಿ ಹೆಚ್ಚು ಮತದಾನ ಮಾಡಿಸುವ ಉದ್ದೇಶದಿಂದ ಮತದಾನದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ, ಚುನಾವಣೆಯ ವರೆಗೆ ಪ್ರತಿ ದಿನವೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲಾಗುತ್ತಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಗರದ ರೈಲ್ವೆ ಅಂಡರ್ ಪಾಸ್ ಬಳಿ ಬೆಳಗ್ಗೆ ೭ ರಿಂದ ೧೧ ಗಂಟೆಯವರೆಗೆ ನಗರ ಹಾಗೂ ತಾಲೂಕಿನಾದ್ಯಂತ ಅಂಗನವಾಡಿ ಶಿಕ್ಷಕರು ಸ್ತ್ರೀ ಶಕ್ತಿ ಸಂಘ ಹಾಗೂ ಆಶಾ ಕಾರ್ಯಕರ್ತರಿಂದ ವಿವಿಧ ಬಣ್ಣಗಳ ಆಕರ್ಷಣೆಯ ೭೦ಕ್ಕೂ ಹೆಚ್ಚು ರಂಗೋಲಿ ಹಾಕುವುದರ ಮೂಲಕ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ತಹಶೀಲ್ದಾರ್ ಬಿ.ಎನ್. ಸ್ವಾಮಿ ಮಾತನಾಡಿ ಮತದಾನ ಎಂಬುದು ಪ್ರಜಾಪ್ರಭುತ್ವದ ಹಕ್ಕು ಯಾರೂ ಸಹ ಮತದಾನದಿಂದ ಹಿಂದೆ ಸರಿಯದೆ ಪ್ರತಿಯೋಬ್ಬರೂ ಮತದಾನ ಮಾಡಿ ನಿಮ್ಮ ಸಮೀಪದ ಕುಟುಂಬಗಳ ಹಾಗೂ ಸ್ನೇಹಿತರಿಗೂ ಸಹ ಮತದಾನದ ಬಗ್ಗೆ ಅರಿವು ಮೂಡಿಸಿ ಮತ ಹಾಕುವಂತೆ ಮಾಡಿ ಇಂದು ಬಿಸಿಲನ್ನು ಲೆಕ್ಕಿಸದೆ ಮಹಿಳೆಯರು ಮನೆಯ ಮುಂದೆ ಹಾಕುವಂತಹ ರಂಗೋಲಿಯನ್ನು ಇಂದು ರಸ್ತೆಯಲ್ಲಿ ಹಾಕುವುದರ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ನಿಮ್ಮ ಅಮೂಲ್ಯವಾದ ಒಂದು ಮತದಿಂದ ಒಬ್ಬ ಸದೃಢ ನಾಯಕನನ್ನು ಆಯ್ಕೆ ಮಾಡುವ ಶಕ್ತಿ ಇದೆ ಅದನ್ನು ವ್ಯರ್ಥ ಮಾಡಬೇಡಿ ಎಂದರು.
ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರಘುನಾಥ್, ವೃತ್ತ ನಿರೀಕ್ಷಕ ಶ್ರೀನಿವಾಸ್, ನಗರಠಾಣೆ PSI ವೇಣುಗೋಪಾಲ್, ಅಆPಔ ನೌತಾಜ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಇತರೆ ಸಂಘ ಸಂಸ್ಥೆಯವರು ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!