ಉದಯವಾಹಿನಿ, ಸತ್ತೂರು : ಭಗವಂತನ ಮಹಿಮೆ, ಸಕಲ ಐಶ್ವರ್ಯಗಳನ್ನು ವಿವರಿಸುವ, ಆತನಲ್ಲಿ ಭಕ್ತಿ ಹೆಚ್ಚಿಸುವ, ಹಾಗೂ ಎಲ್ಲ ಸೂಕ್ಷ್ಮಾತಿ ಸೂಕ್ಷ್ಮ ಜೀವರಾಶಿಗಳ ಹೃದಯದಲ್ಲಿ ನೆಲೆಸಿರುವ , ಚರಾಚರ ವಸ್ತುಗಳ ಚಟುವಟಿಕೆಗಳ ವಿಶೇಷತೆ , ಶ್ರೇಷ್ಠತೆಯಲ್ಲಿಯೂ ಭಗವಂತನ ಮಹಿಮೆ, ಅಸ್ತಿತ್ವ ತಿಳಿಸುವುದು. ವಿಶೇಷವಾಗಿ ಪರಮಾತ್ಮನನ್ನು ಧ್ಯಾನ ಮಾಡುವಾಗ ಯಾವ ಯಾವ ರೂಪದಲ್ಲಿ ಯೋಚಿಸಿ, ಚಿಂತನೆ ಮಾಡಬೇಕು ಎಂದು ವಿಸ್ತಾರವಾಗಿ ತಿಳಿಸುವುದೇ ವಿಭೂತಿ ರೂಪ ಎಂದು ಪಂ. ಕೇಶವಾಚಾರ್ಯ ಕೆರೂರ ತಿಳಿಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ವನಸಿರಿ ನಗರದಲ್ಲಿರುವ  ಸಿ .ಕೆ. ಕುಲಕರ್ಣಿ ಅವರ ನಿವಾಸದಲ್ಲಿ ಹಮ್ಮಿಕೊಂಡಿರುವ ಶ್ರೀಮದ್ ಭಗವದ್ಗೀತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದ ಪೂರ್ವದಲ್ಲಿ ನಾರಾಯಣಿ ಭಜನಾ ಮಂಡಳಿಯವರಿಂದ ಭಜನೆ, ಸದಸ್ಯರಿಂದ ಹರಿವಾಯುಗಳು ಸ್ತೋತ್ರಗಳ ಪಾರಾಯಣ ಜರುಗಿತು ,ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ವಾದಿರಾಜ ಆಚಾರ್ಯ, ಆನಂದ ದೇಶಪಾಂಡೆ, ಡಾ. ಶ್ರೀನಾಥ, ಭೀಮಸೇನ ದಿಗ್ಗಾವಿ, ಹರಿಹರ ಗೋಪಾಲಚಾರ್ಯ, ಆನಂದ ಭಾಗಲ, ಗಿರೀಶ ಪಾಟೀಲ, ಧೀರೇಂದ್ರ ತಂಗೋಡ, ಡಿ. ಕೆ. ಜೋಶಿ ಲಿಂಗೊ ಭಟ್ ಜೋಶಿ ,ಪ್ರಕಾಶ ದೇಸಾಯಿ, ಜಯತೀರ್ಥ ನಿಲೋಗಲ್, ಉದಯ ದೇಶಪಾಂಡೆ, ಪ್ರಮೋದ ಶಿಚಿರುಗುಪ್ಪಿ ,ಅಶೋಕ ಬಹದ್ದೂರ್ ದೇಸಾಯಿ, ಬದರಿನಾಥ್ ಬೆಟಿಗೇರಿ, ಪ್ರಾಣೇಶ ಮಳಗಿ, ಸಂಜೀವ ಜೋಶಿ, ರಮೇಶ್ ಅಣ್ಣಿಗೇರಿ, ಹನುಮಂತ ಪುರಾಣಿಕ, ಮುಂತಾದ ಕುಟುಂಬದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!