ಉದಯವಾಹಿನಿ, ವಿಜಯಪುರ: ಪಟ್ಟಣದಲ್ಲಿನ ಶ್ರೀ ಚೆನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಒಂದೆಡೆ ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ ಬಿಜೆಪಿ ಪಕ್ಷದ ಕೆ ಸುಧಾಕರ್ ರವರು ಶ್ರೀ ಸೌಮ್ಯಕೇಶವ ಸ್ವಾಮಿ ದೇವರ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವದಲ್ಲಿ ಭಾಗವಹಿಸಿ, ಬಿಜೆಪಿ ಹಾಗೂ ಜೆ.ಡಿ.ಎಸ್ ಕಾರ್ಯಕರ್ತರುಗಳು ಹಾಲು-ಜೇನಿನಂತೆ ಸೇರಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಗೆಲ್ಲಲಿರುವೆವೆಂದು ತಿಳಿಸಿದರು.
ಮತ್ತೊಂದೆಡೆ ಕಾಂಗ್ರೆಸ್ನ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್ ಮುನಿಯಪ್ಪ ರವರು, ಶ್ರೀಧರ್ಮರಾಯಸ್ವಾಮಿ ದ್ರೌಪತಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ರಥೋತ್ಸವದಲ್ಲಿ ಭಾಗವಹಿಸಿ, ಪುರಸಭಾ ಮಾಜಿ ಅಧ್ಯಕ್ಷ ಎಂ ಸತೀಶ್ ಕುಮಾರ್‌ರವರ ನಿವಾಸಕ್ಕೆ ತೆರಳಿ, ಕಾಂಗ್ರೆಸ್ ಮುಖಂಡರುಗಳನ್ನು ಮಾತನಾಡಿಸಿ, ತೆರಳಿದರು.
ರಥೋತ್ಸವದಲ್ಲಿ ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ರವರೊಂದಿಗೆ ಪುರಸಭಾ ಸದಸ್ಯ ಶಿಲ್ಪಾ ಅಜಿತ್, ಟೌನ್ ಬಿಜೆಪಿ ಅಧ್ಯಕ್ಷ ಆರ್ ಸಿ ಮಂಜು ನಾಥ್, ಕಾರ್ಯದರ್ಶಿ ಮುನೀಂದ್ರ, ತಾಲೂಕು ಕಾರ್ಯದರ್ಶಿ ರವಿಕುಮಾರ್, ಮಹಂತಿನ ಮಠದ ಕಾರ್ಯದರ್ಶಿ ವಿ ವಿಶ್ವನಾಥ್. ಸಚಿವ ಕೆಎಚ್ ಮುನಿಯಪ್ಪ ರವರೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ರಕ್ಷಾ ರಾಮಯ್ಯ ಬರುವರೆಂದು ನಿರೀಕ್ಷಿಸಲಾಗಿದ್ದು, ಅವರು ಬಾರದಿದ್ದು, ಪುರಸಭಾ ಸದಸ್ಯರಾದ ಎಮ್ ಸತೀಶ್ ಕುಮಾರ್, ನಂಜಣ್ಣ, ಮುನಿಚಿನ್ನಪ್ಪ, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!