ಉದಯವಾಹಿನಿ, ಲಿಂಗಸುಗೂರು: ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಮುನೀರ ಕಾರ ಶೋ ರೂಮಿನಿಂದ ಪರಾಂಭವಾಗಿ ಎಸ್.ಎಲ್.ವಿ. ಲಾಡ್ಡ ರಿಂದ ಡಿ.ಡಿ..ಟಿ.ಸಿ. ಸರಕಾರಿ ಪಾಲಿಟೈನಿಕ ಕಾಲೇಜಿನವರೆಗೆ ಪುರಾತನ ಹಳ್ಳವು ೧೦೦ ಫೀಟಿ ಇದ್ದ ವಿಸ್ತೀರ್ಣವು ಈಗ ಒತ್ತುವರಿ ಮಾಡಿಕೊಳ್ಳುತ್ತಾ ಕೇವಲ ೧೦ ಪೀಟಿಗೆ ತಂದಿರುತ್ತಾರೆ ಈ ಬಗ್ಗೆ ವತ್ತುವರಿ ಮಾಡಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಳ್ಳದ ಹತ್ತಿರ ಇರುವ ಜಮೀನುಗಳು ಎನ್.ಎ. ಆಗಿ ನಿವೇಶನಗಳನ್ನಾಗಿ ಪರಿರ್ವತನೆ ಮಾಡಿಕೊಂಡು ಸದರಿ ಹಳ್ಳವನ್ನು ವತ್ತುವರಿ ಮಾಡಿಕೊಂಡು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಿರುತ್ತಾರೆ. ಸದರಿ ವತ್ತುವರಿ ಮಾಡಿರುವ ಹಳ್ಳವು ಈಗ ೧೦ ಪೀಟಿಗೆ ಬಂದಿರುತ್ತದೆ. ಹಳೆ ಕಾಲದಿಂದ ೧೦೦ ಪೀಟ ಇದ್ದ ಹಳ್ಳವು ವತ್ತುವರಿ ಮಾಡಿಕೊಂಡು ಬಂದಿರುವದರಿಂದ ಹಳ್ಳದ ನೀರು ಸರಿಯಾಗಿ ಮುಂದಕ್ಕೆ ಹೋಗುವದಕ್ಕೆ ಕಷ್ಟಕರವಾಗಿದೆ. ತಮ್ಮ ಕಾರ್ಯಲಯದಿಂದ ಯಾವ ಆಧಾರದ ಮೇಲೆ ಮನೆ ಕಟ್ಟಡ ಕಟ್ಟಲು ಪರವಾನಿಗೆ ನೀಡಿರುತ್ತೀರಿ ಹಳ್ಳವನ್ನು ವತ್ತುವರಿ ಮಾಡಿಕೊಂಡವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಈ ಸಂಧರ್ಭದಲ್ಲಿ ಅಮರೇಶ ಪೂಜಾರಿ ಗಂಗಾಮಾತಾ ಸಮಾಜದ ಮುಖಂಡ ಉಪಸ್ಥಿತರಿದ್ದರು.
