ಉದಯವಾಹಿನಿ, ಕೊಟ್ಟೂರು: ಪಟ್ಟಣದ ಪಟ್ಟಣ ಪಂಚಾಯ್ತಿ ಸದಸ್ಯರಾದ ಬೋರವೆಲ್ ತಿಪ್ಪೇಸ್ವಾಮಿ, ಮಾಜಿ ನಗರ ಘಟಕದ ಅಧ್ಯಕ್ಷರಾದ ವೀರೇಶ ಗೌಡ್ರು, ಎಂ.ಎಂ.ಜೆ .ವಾಗೀಶ್, ಮಾಜಿ ತಾಲೂಕು ಪಂಚಾಯ್ತಿ ಅಧ್ಯಕ್ಷ ಗುರುಮೂರ್ತಿ, ಮರಬದ ಕೊಟ್ರೇಶ್ ಇನ್ನಿತರ ಮುಖಂಡರು ಜಿಲ್ಲಾ ಅಧ್ಯಕ್ಷ ಚೆನ್ನಬಸವನಗೌಡ್ರು ಪಾಟೇಲ್ ನೇತೃತ್ವದಲ್ಲಿ ಜೆಡಿಎಸ್ ನಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ನಗರ ಘಟಕದ ಅಧ್ಯಕ್ಷ ಭರಮನಗೌಡ್ರು ಪಾಟೇಲ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಪಿ.ಹೆಚ್..ಕೊಟ್ರೇಶ್ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ನಂದಿ ವಿಕ್ರಂ,ಹಗರಿಬೊಮ್ಮನಹಳ್ಳಿ ಮಂಡಲ ಉಪಾಧ್ಯಕ್ಷರಾದ ಅಂಗಡಿ ಪಂಪಾಪತಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ಜಿ. ಸಿದ್ದಯ್ಯ, ಎಂ.ಸಿ. ಕೆಂಗಪ್ಪ, ರೈತ ಮೋರ್ಚಾ ಉಪಾಧ್ಯಕ್ಷರಾದ ಕೋನಾಪುರ ಬಸವರಾಜ್, ಕಾರ್ಯದರ್ಶಿ ಶ್ರೀಸತೀಶ್(ಹರಾಳು), ನಗರ ಘಟಕ ಉಪಾಧ್ಯಕ್ಷರಾದ ವಿ. ಕಲ್ಲೇಶ್, ಕಾರ್ಯಕಾರಿಣಿ ಸದಸ್ಯರಾದ ಕೆ.ಬಿ. ಕುಮಾರಸ್ವಾಮಿ, ಹಾಗೂ ಪ್ರಕಾಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು
