ಉದಯವಾಹಿನಿ, ಬೆಂಗಳೂರು: ಇತ್ತೀಚೆಗೆ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ರೋಗಿಗಳಿಗೆ ನೀಡಲಾದ ಕೆಲವು ಔಷಧಿಗಳ ಮೇಲೆ ಪಶು ಸಂಗೋಪನಾ ಪಶುವೈದ್ಯಕೀಯ ವಿಜ್ಞಾನ(ಎಎಚ್‌ವಿಎಸ್) ಎಂಬ ಲೇಬಲ್‌ಗಳನ್ನು ನೋಡಿ ಆಘಾತಗೊಂಡಿದ್ದಾರೆ. ಆದರೆ ಸಂಬಂಧಿಸಿದ ಇಲಾಖೆಯು ಇದು ಕೇವಲ ಲೋಗೋ ಸಮಸ್ಯೆ. ವಾಸ್ತವವಾಗಿ ಔಷಧಗಳು ಮಾನವ ಬಳಕೆಗೆ ಯೋಗ್ಯ ಎಂದು ಹೇಳಿದೆ.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ(KSMSCL) ‘ಲೋಗೋಗ್ರಾಮ್’ ವಿನ್ಯಾಸದಲ್ಲಿ ದೋಷವಿದೆ. ಆದರೆ ಉತ್ಪನ್ನವು ಉತ್ತಮ ಗುಣಮಟ್ಟದ ಮತ್ತು ‘ಮಾನವ ಬಳಕೆಗೆ ಮಾತ್ರ’ ಎಂದು ಹೇಳಿದೆ. ಮುದ್ರಣದೋಷವು ರೋಗಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಆದರೆ ಅಗತ್ಯವಿರುವ ವೈದ್ಯಕೀಯ ಮಾನದಂಡಗಳ ಪ್ರಕಾರ ಮತ್ತು ಮಾನವ ಬಳಕೆಗೆ ಮಾತ್ರ ಈ ಔಷಧಿ ತಯಾರಿಸಲಾಗಿದೆ ಎಂದು KSMSCL ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಸದಾಶಿವ ವಟಾರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
KSMSCL ಮೂಲಗಳ ಪ್ರಕಾರ, AHVS ಲೇಬಲ್ ಹೊಂದಿರುವ ಏಳು ಔಷಧಿಗಳಿವೆ. ಇದು ಕಣ್ಣು ಮತ್ತು ಮೂಗಿನ ಡ್ರಾಪ್ ಗಳನ್ನು ಸಹ ಒಳಗೊಂಡಿತ್ತು.

ಒಟ್ಟು 62.9 ಲಕ್ಷ ರೂ. ಮೌಲ್ಯದ ಈ ಔಷಧಿಗಳನ್ನು ಖಾಸಗಿ ಸಂಸ್ಥೆಯೊಂದು ಸರಬರಾಜು ಮಾಡಿದ್ದು, ಈ ವರ್ಷದ ಜನವರಿ 5 ರಂದು ಸರ್ಕಾರಿ ಗೋದಾಮಿಗೆ ತಲುಪಿದೆ. ಔಷಧಿಗಳೆಂದರೆ ಮೀಥೈಲ್ ಪ್ರೆಡ್ನಿಸೋಲೋನ್ ಇಂಜೆಕ್ಷನ್, ಕಾರ್ಬಾಕ್ಸಿಮೆಥೈಲ್ ಸೆಲ್ಯುಲೋಸ್ ಐ ಡ್ರಾಪ್ಸ್, ಆಕ್ಸಿಮೆಟಾಜೋಲಿನ್ ಪೀಡಿಯಾಟ್ರಿಕ್ (ನಾಸಲ್) ಡ್ರಾಪ್ಸ್, ಫ್ಲುರ್ಬಿಪ್ರೊಫೆನ್ ಐ ಡ್ರಾಪ್ಸ್ ಐಪಿ, ಸೋಡಿಯಂ ಕ್ಲೋರೈಡ್ (ನಾಸಲ್) ಡ್ರಾಪ್ಸ್, ಟಿಮೊಲೋಲ್ ಮಲೇಟ್ ಡ್ರಾಪ್ಸ್ ಮತ್ತು ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್ (ನಾಸಲ್.)

 

Leave a Reply

Your email address will not be published. Required fields are marked *

error: Content is protected !!