ಉದಯವಾಹಿನಿ,ಯಡ್ರಾಮಿ : ತಾಲೂಕಿನ ನೀರಡಗಿ ಗ್ರಾಮದಲ್ಲಿ ವಿಜೃಂಭಣೆಯಿಂದ ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವ ದೊಡ್ಡ ಹಬ್ಬ ಜರುಗಿತು.ಪ್ರತಿ ವರ್ಷ ಮೂರು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಗ್ರಾಮಸ್ಥರು ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ದೊಡ್ಡಹಬ್ಬ ಜರುಗುತ್ತು ಎಂದು ಗ್ರಾಮಸ್ಥರು ತಿಳಿಸಿದರು.ಶ್ರೀ ಬೀರಲಿಂಗೇಶ್ವರ ನೂತನ ಪಲ್ಲಕ್ಕಿ ಹಾಗೂ ಮೂರ್ತಿ ಅಣಬಿ ಹೊಳೆಯಲ್ಲಿ ಗಂಗ ಸ್ನಾನ ಮುಗಿಸಿಕೊಂಡು ಶ್ರೀ ಕಾಳಿಕಾದೇವಿ ಮಂದಿರದಿಂದ ಹಿಡಿದು ಬೀರಲಿಂಗೇಶ್ವರ ದೇವಸ್ಥಾನದವರೆಗೆ ಸುತ್ತಮುತ್ತಲಿ ಗ್ರಾಮಸ್ಥರು ಹಾಗೂ ನೇರಡಿಗೆ ಗ್ರಾಮಸ್ಥರು ಭಕ್ತಾದಿಗಳು ಸಕಲ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ಜರುಗಿತ್ತು.ಡೊಳ್ಳು ಕುಣಿತ ಹಾಗೂ ವೀರಗಾಸೆ ಪ್ರೇಕ್ಷಕರ ಮನಸ್ಸಳಿಯಿತು ಪೂಜ್ಯರಿಂದ ಹೇಳಿಕೆಗಳು ನಡೆದವು.
ನೆರಡಗಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಬೀರಲಿಂಗೆಶ್ವರ ದೊಡ್ಡ ಹಬ್ಬ ಎಂದು ಆಚರಣೆ ಮಾಡುತ್ತೇವೆ. ಇದು ಊರಿಗೆ ಹಬ್ಬವಾಗಿರುತ್ತದೆ. ಜಾತಿ ಮತ ಪಂಥ ಬೀದವಿಲ್ಲದೆ ಎಲ್ಲಾ ಸಮುದಾಯದವರು ಒಗ್ಗೂಡಿ ಈ ಒಂದು ಉತ್ಸವ ಆಚರಣೆ ಮಾಡುತ್ತೇವೆ. ಸ್ವರ್ಗ ಲೋಕವೇ ಭೂಮಿಗೆ ಬಂದಂತೆ ಪ್ರಾಯಶವಾಗುತ್ತದೆ. ಪ್ರತಿಯೊಂದು ಊರಿನ ಹೆಣ್ಣು ಮಕ್ಕಳು ಗಂಡನ ಮನೆಯಿಂದ ಆಗಮಿಸಿ ಬೀರಲಿಂಗೇಶ್ವರ ದೇವರಿಗೆ ಕಾರ್ಯಕರ್ತಪಣೆ ಮಾಡಿ ಕೃಪೆಗೆ ಪಾತ್ರವಾಗುತ್ತಾರೆ. ಊರಿನ ಹೆಣ್ಣು ಮಕ್ಕಳಿಗೆ ಇದು ದೊಡ್ಡ ಹಬ್ಬ.
ಪೂಜ್ಯರು ಶರಣಪ್ಪ ಪೂಜಾರಿ ಹಂದನೂರ ಭಕ್ತರು ಕಾಯಿ ಕರ್ಪೂರ ಸಮರ್ಪಣೆ ಮಾಡಿ ಬೀರಲಿಂಗೇಶ್ವರ ಕೃಪೆಗೆ ಪಾತ್ರರಾದರು. ಊರಿನ ಪ್ರಮುಖ ಬೀದಿಗಳಲ್ಲಿ ಭಕ್ತರು ಶ್ರೀ ಬೀರಲಿಂಗೇಶ್ವರ ಪಲ್ಲಕ್ಕಿಗೆ ಗಂಗಾ ಸ್ನಾನ ಮಾಡಿಸಿ ಕಾಯಿ ಕರ್ಪೂರ ಬೆಳಗಿದರು.ಸಾಯಂಕಾಲ 9:00 ಗಂಟೆಗೆ ಡೊಳ್ಳಿನ ಪದಗಳು ನಡೆದವು ಬೆಳಗ್ಗೆ ಜಾವ ವಿವಿಧ ಗ್ರಾಮದಿಂದ ಆಗಮಿಸಿದ ಪೂಜ್ಯರಿಂದ ಮಳೆ ಬೆಳೆ ಹಾಗೂ ರಾಜಕೀಯ ಕುರಿತು ಹೇಳಿಕೆ ನೀಡಿದವು. ಹಾಲುಮತದ ಗುರುಗಳು ರೈತರ ಕುರಿತು ಒಳ್ಳೆ ಹೇಳಿಕೆ ನೀಡಿದ್ದು ಇಲ್ಲಿ ಕಂಡುಬಂದಿರುತ್ತದೆ. ಈ ಸಂದರ್ಭದಲ್ಲಿ ಮಲ್ಲನಗೌಡ ಪಾಟೀಲ್, ಮಡಿವಾಳಪ್ಪ ಗೌಡ ಪೊಲೀಸ್ ಪಾಟೀಲ್, ನಿಂಗಣ್ಣ ಶಿರವಾಳ, ಬಸವರಾಜ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಅಶೋಕ್ ತೋಟದ, ತಿಪ್ಪಣ್ಣ ಹೊಸಮನಿ, ಮಾಳಪ್ಪ ಹೊಸ್ಮನಿ, ನಾಗಣ್ಣ ಹಳಿಮನಿ, ಚಂದ್ರಶೇಖರ್ ತೋಟದ, ವಿಶ್ವನಾಥ್ ಹೊಸಮನಿ, ರಾಜಶೇಖರ್ ಶೆಟ್ಟಿಗೇರಿ, ಸುತ್ತಮುತ್ತಲಿ ಗ್ರಾಮಸ್ಥರ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
