ಉದಯವಾಹಿನಿ, ಭಟ್ಕಳ : ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು, ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.ಭಟ್ಕಳದ ಮಾವಿನ ಕುರ್ವೆ ಬಂದರಿನಲ್ಲಿ ಘಟನೆ ನಡೆದಿದೆ. ಅಲೆಯ ರಭಸಕ್ಕೆ ಬೋಟ್ ಮುಳುಗಡೆಯಾಗಿದ್ದು, ಕೂಡಲೇ ಅಲ್ಲಿದ್ದವರು ನಾಲ್ವರನ್ನು ರಕ್ಷಿಸಿದ್ದಾರೆ.ನರಸಿಂಹ ಗೋವಿಂದ ಖಾರ್ವಿ ಎಂಬುವವರಿಗೆ ಸೇರಿದ ಬೋಟ್ ಇದಾಗಿದ್ದು, ಲಕ್ಷಾಂತರ ರೂ ನಷ್ಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
