ಉದಯವಾಹಿನಿ , ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಯಾವುದೇ ವ್ಯವಹಾರ ಮಾಡಿದ್ದರೂ ಅದನ್ನು ಕೈಯಲ್ಲಿ ಬರೆದಿಟ್ಟುಕೊಳ್ಳುವ ಹವ್ಯಾಸ ರೂಢಿಸಿಕೊಂಡಿದ್ದರು. ವಿಶೇಷ ತನಿಖಾ ತಂಡದ (SIT) ತನಿಖೆ ಚುರುಕುಗೊಂಡಿದ್ದು ರಿಚ್ಮಂಡ್ ಸರ್ಕಲ್‌ನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಅಧಿಕಾರಿಗಳು ಅಪಾರ ಪ್ರಮಾಣದ ದಾಖಲೆಯನ್ನು ಸಂಗ್ರಹಿಸಿದ್ದಾರೆ. ಯಾವುದೇ ವ್ಯವಹಾರ ಮಾಡಿದರೂ ಎಲ್ಲವನ್ನೂ ಸಿಜೆ ರಾಯ್ ಬರೆದುಕೊಳ್ಳುತ್ತಿದ್ದರು. ಇಂದಿನ ವ್ಯವಹಾರ, ಯಾರನ್ನು ಭೇಟಿ ಮಾಡಬೇಕು, ಎಲ್ಲಿಗೆ ಹೋಗಬೇಕು ಎಲ್ಲವನ್ನೂ ಕೈ ಬರಹದಲ್ಲೇ ರಾಯ್ ಡೈರಿಯಲ್ಲಿ ಬರೆಯುತ್ತಿದ್ದರು.
ಸಿಜೆ ರಾಯ್ ಕೈ ಬರಹದಲ್ಲಿ ಬರೆದಿರುವ ಅಪಾರ ಪ್ರಮಾಣದ ದಾಖಲೆಗಳನ್ನು ಎಸ್‌ಐಟಿ ವಶಕ್ಕೆ ಪಡೆದು ಕುಲಂಕುಶವಾಗಿ ಪರಿಶೀಲನೆ ನಡೆಸುತ್ತಿದೆ. ಸದ್ಯದ ತನಿಖೆಯಲ್ಲಿ ಆತ್ಮಹತ್ಯೆ ಸಂಬಂಧಿಸಿದಂತೆ ಯಾವುದೇ ನೋಟ್ ಬರೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
