ಉದಯವಾಹಿನಿ, ಕೋಲಾರ: ಖಾಸಗಿ ದೂರುದಾರ ಮಾಡಿರುವ ಅರೋಪ ಹಿನ್ನಲೆಯಲ್ಲಿ ಹೊರತಾಗಿ ರಾಜ್ಯಪಾಲರು ಮುಖ್ಯ ಮಂತ್ರಿಗಳಿಗೆ ಷೋಕಾಸ್ ನೋಟಿಸ್ ನೀಡಿರುವುದು ಹೊರತಾಗಿ ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲ .ಆದರೆ ಪೊಲೀಸರ ವಿಚಾರಣೆಯ ವರದಿ ಇಲ್ಲದೆ ಏಕಾಏಕಿ ಪ್ರಾಸಿಕೋಷ್ಯನ್‌ಗೆ ಒಳಪಡೆಸಿರುವುದು ರಾಜ್ಯಪಾಲರು ಮಾಡಿರುವ ಪಕ್ಷಪಾತದ ನಡೆಯ ಪರಮಾವಧಿ ಎಂಬುವುದನ್ನು ಸ್ವಷ್ಟ ಪಡೆಸಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅಸಮಾಧಾನ ವ್ಯಕ್ತ ಪಡೆಸಿದರು,
ನಗರದಲ್ಲಿ ಮಾದ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಅವರು ಮಾತನಾಡಿ ಈ ಹಿಂದೆ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಮೇಲೆ ಬಂದಿದ್ದ ಅರೋಪವನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿ ಪ್ರಾಸಿಕೋಷನ್‌ಗೆ ನೀಡ ಬಹುದೆಂದು ವರದಿ ನೀಡಿದ್ದರೂ ಸಹ ಮಾನ್ಯತೆ ನೀಡಿ ಕ್ರಮ ಕೈಗೊಳ್ಳದ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ದ ದೂರು ಬಂದ ೨೪ ಗಂಟೆಯ ಒಳಗೆ ಏಕಾಏಕಿ ಪ್ರಾಸಿಕ್ಯೊಷನ್‌ಗೆ ನೀಡುವಂತ ಅತುರತೆ ಏನಿತ್ತು? ಎಂದು ಪ್ರಶ್ನಿಸಿದರು.
ರಾಜ್ಯಪಾಲರ ತಾರತಮ್ಯದ ನಡೆಯು ರಾಜ್ಯದಲ್ಲಿ ಜನಜನಿತವಾಗಿದೆ ಹಾಗಾಗಿ ಎಲ್ಲೆಡೆ ರಾಜ್ಯಪಾಲರ ನಡೆಯನ್ನು ಖಂಡಿಸಿ ಜನತೆ ಪ್ರತಿಭಟಿಸುತ್ತಿದ್ದಾರೆ. ಇದರಿಂದ ಮುಂದೆ ರಾಜ್ಯದಲ್ಲಿನ ಶಾಂತಿ ಸುವ್ಯವಸ್ಥೆ ಹಾಳಗುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು,
ಬಿಜೆಪಿ ಸರ್ಕಾರವು ರಾಜ್ಯಕ್ಕೆ ನೀಡ ಬೇಕಾದ ಬರಪರಿಹಾರವು ನ್ಯಾಯಾಯುತವಾಗಿ ನೀಡಲಿಲ್ಲ. ನ್ಯಾಯಾಲಯದ ಮೊರೆ ಹೋಗಿ ಪಡೆಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗಾಗಲೇ ಕೊರೋನಾದಲ್ಲಿ ಖರೀದಿಯ ಹಗರಣವನ್ನು ಈಗಾಗಲೇ ತನಿಖೆಯು ಅಂತಿಮವಾಗಿದೆ ಎಂದರು.
ಐವಾನ್ ಡಿಸೋಜಾ ಅವರ ಹೇಳಿಕೆಯು ಸಮರ್ಪಕವಾಗಿಲ್ಲ ಯಾರೊ ಅಂತಹ ಹೇಳಿಕೆಗಳನ್ನು ನೀಡಬಾರದು ಯಾರೇ ಅದರೂ ಬಾಂಗ್ಲ ಮಾದರಿಯಲ್ಲಿ ದಂಗೆ ಏಳಬೇಕಾಗುವುದು ಎಂಬ ಮಾತುಗಳು ಸಮಾಂಜಸವಲ್ಲ. ಸಿದ್ದರಾಮಯ್ಯನವರೇ ನನ್ನ ಆಡಳಿತಾವಧಿಯಲ್ಲಿ ಇಂತದಕ್ಕೆ ಅವಕಾಶವಿಲ್ಲ. ಈ ಹಿಂದೆಯೂ ನೀಡಿಲ್ಲ. ಈಗಲು ನೀಡುವುದಿಲ್ಲ ಎಂದ ಅವರು ಸಂವಿಧನದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಇಂಥಹುದರಲ್ಲಿ ಭಾಗಿಯಾದರೆ ನೋಡಿ ಕೊಂಡು ಸುಮ್ಮನೆ ಕೊರಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *

error: Content is protected !!