ಉದಯವಾಹಿನಿ,ಕೆ.ಆರ್.ಪುರ: ಕ್ಷೇತ್ರದ ಬಾಬುಸಾಪಾಳ್ಯದ ಬಿಜೆಪಿ ಮುಖಂಡರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಸೇರ್ಪಡೆಮಾಡಿಕೊಂಡು ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಅವರು ಕಾಂಗ್ರೆಸ್ ಪಕ್ಷ ಜನಪರ ಆಡಳಿತ ನೀಡುವ ಸರ್ಕಾರ ವಾಗಿದ್ದು ಕಾಂಗ್ರೆಸ್ ಪಕ್ಷದಿಂದ ಜನತೆಯ ಸಮಗ್ರ ಅಭಿವೃದ್ಧಿ ಸಾದ್ಯ ಎಂದು ನುಡಿದರು.
ಕಾಂಗ್ರೆಸ್ ಪಕ್ಷ ತಂದ ಹಲವಾರು ಜನಪರ ಯೋಜನೆಗಳನ್ನು ಬಿಜೆಪಿ ರದ್ದುಪಡಿಸುವ ಮೂಲಕ ದೊಡ್ಡ ಸಾಧನೆ ಮಾಡಿದೆ,ಖಡ್ಢಾಯ ಶಿಕ್ಷಣದ ಅಡಿ ಖಾಸಗಿ ಶಾಲೆಯಲ್ಲಿ ಸಿಗುತ್ತಿದ್ದು ವಿದ್ಯಾಭ್ಯಾಸಕ್ಕೆ ಬಿಜೆಪಿ ಪಕ್ಷ ಅಡ್ಡಿ ಮಾಡುವ ಮೂಲಕ ಆ ಯೋಜನೆಯನ್ನು ದುರ್ಬಲಗೊಳಿಸಿದೆ ಎಂದರು.
ಬಡ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಕುಂದುತಂದ ಬಿಜೆಪಿ ಸರ್ಕಾರ ಹಾಗೂ ಪಕ್ಷದಿಂದ ಅಭಿವೃದ್ಧಿ ಅಸಾಧ್ಯ ಎಂದು ನುಡಿದರು
ಬಾಬುಸಾಪಾಳ್ಯದ ಪಿ.ಬಾಬು ಹಾಗೂ ಸಂಗಡಿಗರಾದ ಚೇಲಿಯನ್,ಕರ್ತಿಕ್,ಎ.ಬಾಬು,ಆರ್.ಸುಂದರ್,ಸೆಲ್ವಿಕಲಾ ಸರಳ,ದೇವಿ, ಚೇಲಮ್ಮ,ಪರಮೇಶ್ವರಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಭೂನ್ಯಯಮಂಡಳಿ ಸದಸ್ಯ ಸಿ.ವೆಂಕಟೇಶ್, ಹಿರಿಯ ಮುಖಂಡರಾದ ಅಗರ ಆರ್. ಪ್ರಕಾಶ್, ವಾರ್ಡನ ಅಧ್ಯಕ್ಷ ಎಸ್.ಬಾಬು,ಮುಖಂಡರಾದ ರಾಮಾಂಜಿನಪ್ಪ,ಜಿ.ವಿ.ನಾರಾಯಣ್,ಪುರುಷೋತ್ತಮ, ಪುನೀತ್, ಶ್ರೀನಿವಾಸ್,ಚಂದ್ರಪ್ಪ, ಇದ್ದರು.
