ಉದಯವಾಹಿನಿ,  ಕೆಂಗೇರಿ : ಶ್ರೀಕೃಷ್ಣ ಅಧರ್ಮವನ್ನು ಮಟ್ಟ ಹಾಕಿ ಧರ್ಮವನ್ನು ಉಳಿಸುತ್ತಾ ಬಂದಿದ್ದಾನೆ ಕೃಷ್ಣನ ಬಗ್ಗೆ ಎಷ್ಟು ಗುಣಗಾನ ಮಾಡಿದರು ಸಾಲದು ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು. ಜ್ಞಾನಭಾರತಿ ವಾರ್ಡಿನ ಆದರ್ಶ ಬಡಾವಣೆಯ ಶ್ರೀಕೃಷ್ಣ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿಯ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶ್ರೀ ಕೃಷ್ಣ ಪರಮಾತ್ಮ ಜಗತ್ತಿಗೆ ಧರ್ಮದ ಮಾರ್ಗವನ್ನು ತೋರಿಸಿದವರು. ಧರ್ಮಕ್ಕೆ ಜಯವಿರುತ್ತೆ ನಾವೆಲ್ಲರೂ ಧರ್ಮದ ಪರ ಇರಬೇಕು.
ಏನೇ ಕಷ್ಟಕಾರ್ಪಣ್ಯಗಳು ಬಂದರೂ ಕೂಡ ನಾವು ಧೈರ್ಯದಿಂದ ನಡೆದುಕೊಂಡರೆ ಭಗವಂತ ನಮ್ಮೆಲ್ಲರನ್ನು ಕಾಪಾಡುತ್ತಾನೆ ನಾವು ಧರ್ಮವನ್ನು ರಕ್ಷಣೆ ಮಾಡಿದರೆ.
ಧರ್ಮವೇ ನಮ್ಮನ್ನು ರಕ್ಷಣೆ ಮಾಡುತ್ತದೆ ನಮ್ಮ ದೇಶದಲ್ಲಿ ಅಲ್ಲದೆ ವಿದೇಶಗಳಲ್ಲೂ ಶ್ರೀಕೃಷ್ಣನ್ನು ಆರಾಧಿಸುವ ಅಪಾರಭಕ್ತರು ಇದ್ದಾರೆ ಇಡೀ ಜಗತ್ತೇ ಶ್ರೀಕೃಷ್ಣನ ಬಗ್ಗೆ ಅಪಾರವಾದ ಭಕ್ತಿ ಗೌರವ ಹೊಂದಿದ್ದಾರೆ ಎಂದು ತಿಳಿಸಿದರು. ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚ ಉಪಾಧ್ಯಕ್ಷ ಎಂ. ಮಂಜುನಾಥ್ ಮಾತನಾಡಿ ಶ್ರೀ ಕೃಷ್ಣನ ಭಗವದ್ಗೀತೆಯ ಶ್ಲೋಕವನ್ನು ಬದುಕಿಗೆ ಸಾಕಷ್ಟು ಸ್ಪೂರ್ತಿದಾಯಕವಾಗಿದೆ. ಶ್ರೀ ಕೃಷ್ಣನ ಸಂದೇಶಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಬೇಕು. ಅದರ್ಮ ಹೆಚ್ಚಾಗಿದೆ ಸತ್ಯ ಮರೆಯಾಗಿದೆ ಕಲ್ಕಿಯಂತೆ ಭಗವಂತ ಅವತರಿಸಿ ಬರುತ್ತಾನೆ ಎನ್ನುವುದನ್ನು ಬಿಟ್ಟು ಹಿಂದುಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಅಧ್ಯಯನ ಮಾಡುವ ಮೂಲಕ ಅದರ ಸಾರಾಂಶವನ್ನು ಅರಿತು ಬದುಕಿದರೆ ಸಾಕು ಸಮಾಜದಲ್ಲಿ ಅಧರ್ಮ ದೂರವಾಗಿ ಸತ್ಯ ನೆಲೆಸುತ್ತದೆ ಎಂದರು. ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚ ಉಪಾಧ್ಯಕ್ಷ ಎಂ. ಮಂಜುನಾಥ್, ಹನುಮೇಗೌಡ, ವಾಗೀಶ್ , ಸಹಸ್ರಾರು ಭಕ್ತರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!