ಉದಯವಾಹಿನಿ, ಆಳಂದ: ಪಟ್ಟಣದಲ್ಲಿನ ಜಗದ್ಗುರು ತಿಂಥಣಿಯ ಮೌನೇಶ್ವರರ ಜಾತ್ರಾ ಮಹೋತ್ಸವ ಹಾಗೂ ಶ್ರಾವಣಮಾಸದ ಪುರಾಣ ಮಹಾಮಂಗಲ ಸಮಾರಂಭವು ಸೆ.4ರಿಂದ ಎರಡು ದಿನಗಳವರೆಗೆ ನಡೆಯಲಿದೆ ಎಂದು ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರಾವಣ ಮಾಸದ ಅಂಗವಾಗಿ ಅ.5ರಿಂದ ಸಾಗಿಬಂದ ಮೌನೇಶ್ವರರ ಮಹಾಪುರಾಣವನ್ನು ಪುರಾಣ ಪಟು ವಾಗ್ಮೀ ಆಗಿರುವ ಪಟ್ಟಣ ಗ್ರಾಮದ ಮಡಿವಾಳಪ್ಪ ಬಸಣ್ಣಾ ನಂದೂರ ಹೇಳಿಕೊಡುತ್ತಿದ್ದು, ಸಂಗೀತ ಸಾಥಿಯಾಗಿ ಗವಾಯಿ ರಾಜೇಂದ್ರ ಸುತಾರ, ತಬಲಾ ಸಾಥಿ ಸಂಜುರಾವ್ ದೇಶಪಾಂಡೆ ಪಾಲ್ಗೊಂಡಿದ್ದಾರೆ.
ಸೆ.4ರಂದು ಬೆಳಗಿನ 8:ಗಂಟೆಗೆ ವಿಶ್ವಕರ್ಮ ಧ್ವಜಾರೋಹಣ ರಾತ್ರಿ ಭಜನೆ, ಸಂಗೀತ ಮತ್ತು ಶಿವನಾಮದೊಂದಿಗೆ ಜಾಗರಣೆ ನಡೆಯಲಿದೆ. 5ರಂದು ಬೆಳಗಿನ ಜಾವ ಮೌನೇಶ್ವರ ಮೂರ್ತಿಗೆ ಮಹಾಭಿಷೇಕ ಸಹಸ್ರಬಿಲ್ವಾರ್ಚನೆ ನಂತರ ಮಂದಿರದಿಂದ ಪ್ರಮುಖ ರಸ್ತೆಗಳ ಮೂಲಕ ಜೋಡು ಪಲ್ಲಕಿ ಉತ್ಸವ ಹೊರಟು ದೇವಸ್ಥಾನಕ್ಕೆ ತಲುಪಿ ಪುರಾಣ ಮಹಾಮಂಗಲ, ಪುರವಂತರ ಸನ್ಮಾನ, ಮೌನೇಶ್ವರ, ಗೋನಾಳ ಆದಿಲಿಂಗೇಶ್ವರ, ಕಾಶಿ ವಿಶ್ವನಾಥÀ, ವರವಿ ಮೌನಲಿಂಗ, ಹಾಗೂ ಸಿರಸಂಗಿ ಕಾಳಿಕಾದೇವಿ ಹೆಸರಿನ ತೆಂಗಿನ ಲಿಲಾವು ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ನಡೆಯಲಿದೆ.
