ಉದಯವಾಹಿನಿ, ಗುರುಮಠಕಲ್: ಪಟ್ಟಣದ ಕಾಕಲವಾರ ಕ್ರಾಸ್ ವೃತ್ತ, ಬಸವೇಶ್ವರ ವೃತ್ತ(ಗಂಜ್), ಬಸ್ ನಿಲ್ದಾಣದ(ಅಂಬಿಗರ ಚೌಡಯ್ಯ ವೃತ್ತ) ಸಮೀಪ ಬೀದಿ ನಾಯಿಗಳ ಉಪಟಳ ಹೆಚ್ಚಿದ್ದು, ಸಾರ್ವಜನಿಕರು ಆತಂಕದಲ್ಲಿಯೇ ಓಡಾಡುವಂತಾಗಿದೆ.
‘ರಾತ್ರಿ ವೇಳೆ ಹೈದರಾಬಾದ್ ನಗರದಿಂದ ಬಸ್ ಮೂಲಕ ಬಂದು, ಮನೆಗೆ ತೆರಳುವಾಗ ಬಸ್ ನಿಲ್ದಾನದಲ್ಲಿದ್ದ ನಾಯಿಗಳ ಹಿಂಡು ಬೊಗಳುತ್ತಾ ಬೆನ್ನಟ್ಟಿದವು.ಅದೃಷ್ಟಕ್ಕೆ ಹಲ್ಲೆ ಮಾಡಲಿಲ್ಲ. ಆದರೆ, ಮನೆಗೆ ತೆರಳುವವರೆಗೂ ಎದೆ ಬಡಿತ ಇಳಿಯಲೇ ಇಲ್ಲ’ ಎಂದು ವ್ಯಾಪಾರಿಯೊಬ್ಬರು ಹೇಳಿದರು.
‘ಈಚೆಗೆ ತಿಂಗಳ ಅವಧಿಯಲ್ಲಿ ನಮ್ಮ ತಂದೆಯವರಿಗೆ ನಾಯಿ ಕಚ್ಚಿದ್ದವು. ಇದು ಮುಂದುವರಿದರೆ ಚಿಕ್ಕಮಕ್ಕಳು ಮತ್ತು ಶಾಲಾ ಮಕ್ಕಳ ಸ್ಥಿತಿ ಊಹಿಸಲಾಗದು. ಕೂಡಲೇ ಸಮಸ್ಯೆ ಪರಿಹರಿಸಲು ಸ್ಥಳೀಯ ಆಡಳಿತ ಸಂಬಂದಿತ ಇಲಾಖೆಗಳ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಬೇಕು’ ಎಂದು ದಸಂಸ ಸಂಚಾಲಕ ಲಾಲಪ್ಪ ತಲಾರಿ ಹೇಳಿದರು. ನಾಯಿಗಳ ಹಿಂಡು ರಸ್ತೆಯಲ್ಲಿ ಎದುರುಗೆ ಬಂದು ಗಟುರು ಹಾಕಿದರೆ ಜೀವ ಹೋದಂತಾಗುತ್ತದೆ ಲಾಲಪ್ಪ ತಲಾರಿ ಡಿಎಸ್‌ಎಸ್ ಸಂಚಾಲಕನಾಯಿಗಳ ಉಪಟಳ ಮತ್ತೆ ಹೆಚ್ಚಾಗಿದೆ.
