ಉದಯವಾಹಿನಿ, ಕೋಲಾರ : ಚೋರನನ್ನು ಬಂಧಿಸಿರುವ ಪೊಲೀಸರು ವಿವಿಧಡೆ ಕಳವು ಮಾಡಲಾಗಿದ್ದ ೧೪ ಲಕ್ಷ ರೂ ಮೌಲ್ಯದ ೪ ಟ್ರಾಕ್ಟರ್‌ಗಳು ೧ ನೀರಿನ ಟ್ಯಾಂಕ್ ವಾಹನವನ್ನು ವಶಕ್ಕೆ ಪಡೆದಿರುವ ಪ್ರಕರಣ ಮುಳಬಾಗಿಲು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ತಮಿಳು ನಾಡಿನ ಕಥಷ್ಟನಗಿರಿ ಜಲ್ಲೆಯ ತಮಿಳು ನಾಡಿನ ಹೊಸೂರು ತಾಲ್ಲೂಕಿನ ಕಮನದೊಡ್ಡಿ ತುಮ್ಮನಪಲ್ಲಿ ಗ್ರಾಮದ ಶ್ರೀನಿವಾಸಲು ಬಿನ್ ವೆಂಕಟಪ್ಪ ಎಂದು ಗುರುತಿಸಲಾಗಿದೆ.
ಮುಳಬಾಗಿಲಿನ ತಾಯಲೂರು ಗ್ರಾಮದ ಟಿ.ಸಿ.ರಾಜಪ್ಪ ಬಿನ್ ಚೆನ್ನಪ್ಪ ಎಂಬುವರು ಕಳೆದ ತಿಂಗಳು ಜುಲೈ ೩೧ ರಂದು ರಾತ್ರಿ ತಮ್ಮ ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್ ಮತ್ತು ಟ್ರಾಲಿ ವಾಹನವು ಮಾರನೆ ದಿನ ಬೆಳಿಗ್ಗೆ ನೋಡಲಾಗಿ ಕಳವು ಅಗಿದೆ, ಕಳವು ಅಗಿರುವ ತಮ್ಮ ವಾಹನವನ್ನು ಪತ್ತೆ ಮಾಡಿ ಕೊಡಬೇಕೆಂದು ಆಗಸ್ಟ್ ೧ ರಂದು ಬೆಳಿಗ್ಗೆ ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು,
ಪ್ರಕರಣವನ್ನು ದಾಖಲಿಸಿದ್ದ ಪೊಲೀಸರು, ಎಸ್.ಪಿ ನಿಖಿಲ್ ಅವರ ಸೂಚನೆ ಮೇರೆಗೆ ವಿಶೇಷ ತಂಡವನ್ನು ಪತ್ತೆ ಕಾರ್ಯಕ್ಕೆ ನಿಯೋಜಿಸಲಾಗಿತ್ತು, ಈ ತಂಡದಲ್ಲಿ ಎ.ಎಸ್.ಪಿ. ರವಿ ಶಂಕರ್ ಮತ್ತು ಜಗದೀಶ್ ಅವರ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ. ನಂದಕುಮಾರ್, ಸಿ.ಪಿ.ಐ. ಸತೀಶ್, ಮತ್ತು ಪಿ.ಎಸ್.ಐ. ವಿಠಲ್ ವೈ ತಳವಾರ್ ಅವರು ಪತ್ತೆ ಕಾರ್ಯದ ನೇತ್ರತ್ವ ವಹಿಸಿದ್ದು ಆ,೨೬ ರಂದು ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದರು.

