ಉದಯವಾಹಿನಿ,ಕೋಲಾರ : ನಾಡಿನಾದ್ಯಂತ ಮನೆ ಮನೆಗಳಲ್ಲಿ ಚಿರಪರಿಚಿತವಾಗಿರುವ ನಂದಿನಿ ಹಾಳು, ಮೊಸರು, ಹಾಗೂ ಇನ್ನಿತರೆ ಉತ್ಪನ್ನಗಳು ಇದೀಗ ಉತ್ತರ ಭಾರತದಲ್ಲೂ ತನ್ನ ಮಾರಾಟದ ಜಾಲವನ್ನು ವಿಸ್ತರಿಸಲು ಮುಂದಾಗಿದೆ. ಮುಂದಿನ ತಿಂಗಳು ಅಕ್ಟೋಬರ್‌ನಿಂದ ದೆಹಲಿಯಲ್ಲಿ ಹಾಲು ಮತ್ತು ಮೊಸರು ಮಾರಾಟವನ್ನು ಕರ್ನಾಟಕ ಹಾಲು ಒಕ್ಕೂಟ (ಕೆ.ಎಂ.ಎಫ್) ಪ್ರಾರಂಭಿಸಲಿದೆ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ತಿಳಿಸಿದರು,
ಮಾದ್ಯಮದವರೊಂದಿಗೆ ಅವರು ಮಾತನಾಡಿ ದೇಶದ ಬಹುತೇಕ ಭಾಗಗಳಲ್ಲಿ ಹಸಿವಿನ ಹಾಲಿನ ಬಳಕೆ ಹೆಚ್ಚುತ್ತಿರುವುದರಿಂದ ಕೆ.ಎಂ.ಎಫ್ ತನ್ನ ಮಾರಾಟದ ವ್ಯವಹಾರವನ್ನು ವಿಸ್ತರಿಸಲು ಇದು ಸೂಕ್ತ ಸಮಯವಾಗಿದೆ ಎಂದು ಹೇಳಿದರು,
ಅಕ್ಟೋಬರ್ ಮೊದಲ ವಾರದಿಂದ ನೀಲಿ, ಹಸಿರು, ಕೆಂಪು ಮತ್ತು ಕಿತ್ತಳೆ ಬಣ್ಣದ ಮಾದರಿಯ ಪಾಕೇಟ್‌ಗಳೊಂದಿಗೆ ರಾಷ್ಟ್ರದ ರಾಜದಾಧನಿ ದೆಹಲಿಯನ್ನು ಪ್ರವೇಶಿಸುವಂತೆ ಮಾಡುವ ನಮ್ಮ ಗುರಿಯು ಬಹುತೇಕ ಯಶಸ್ವಿಯಾಗಲಿದೆ ಎಂದು ಆಶಿಸಿದ ಅವರುವ ಮೊದಲ ಆರು ತಿಂಗಳು ಕಾಲ ದಿನನಿತ್ಯ ಸುಮಾರು ೨ ಲಕ್ಷ ಲೀಟರ್ ಹಾಲು ಮಾರಾಟ ಮಾಡಿ ಕ್ರಮೇಣ ಅದನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು. ಪ್ರಶ್ನೆಯೊಂದಕ್ಕೆ ಕಂಪನಿ ಗುಡ್ ಲೈಫ್ ಬ್ರಾಂಡ್ ಮಾತ್ರವಲ್ಲದೆ ಪ್ರತಿದಿನವು ಮಾರಾಟದೊಂದಿಗೆ ನೇರವಾಗಿ ಮಾರಾಟಕ್ಕಾಗಿ ಉತ್ತರ ಭಾರತದ ರಾಜ್ಯಗಳತ್ತ ಸಾಗುತ್ತಿರುವುದು ಇದೇ ಮೊದಲು ಎಂದು ಹೇಳಿದರು. ಅಂಕಿ ಅಂಶಗಳ ಪ್ರಕಾರ, ಮದರ್ ಡೈರಿ ಪ್ರತಿದಿನ ಸುಮಾರು ೧೦ ಲಕ್ಷ ಲೀಟರ್ ಹಸುವಿನ ಹಾಲನ್ನು ಮಾರಾಟ ಮಾಡಲಾಗುತ್ತದೆ. ನಾವು ಹಸುವಿನ ಹಾಲಿನ ಬ್ರಾಂಡ್ ಅಗಿದ್ದು, ದೆಹಲಿಯ ಮಾರುಕಟ್ಟೆಯಲ್ಲಿ ನಮಗೆ ಉತ್ತಮ ಆವಕಾಶವಿದೆ ದಿನಕ್ಕೆ ಸುಮಾರು ೨೫ ಸಾವಿರ ಲೀಟರ್‌ಗಳಷ್ಟು ಮೊಸರನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಅದರೆ ದೊಡ್ಡ ನಗರಗಳಲ್ಲಿ ಹೆಚ್ಚಾಗಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುವುದು ಎಂದು ಹೇಳಿದರು.
