ಉದಯವಾಹಿನಿ, ಕೋಲಾರ: ಕೋಲಾರ ಜಿಲ್ಲಾ ಸೇವಾದಳ ಅಧ್ಯಕ್ಷರು, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ಕೆ.ಎಸ್.ಗಣೇಶ್ ಅವರಿಗೆ ನಗರದ ಗೋಕುಲ ಮಿತ್ರಬಳಗದ ಸದಸ್ಯರು ಸನ್ಮಾನಿಸಿ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು.
ಬಿಜೆಪಿ ಮುಖಂಡ ಕೆ.ಚಂದ್ರಾರೆಡ್ಡಿ ಮಾತನಾಡಿ, ಸತತ ೩೦ ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕಾರಂಗದಲ್ಲಿ ಕೆಲಸ ಮಾಡಿರುವ ಗಣೇಶ್ ಎಲ್ಲಿಯೂ ಹೆಸರು ಕೆಡಿಸಿಕೊಳ್ಳುವ ಕೆಲಸ ಮಾಡಲಿಲ್ಲ, ವೃತ್ತಿ ಘನತೆ ಕಾಪಾಡಿಕೊಂಡು ಬಂದಿದ್ದಾರೆ ಎಂದು ಶುಭ ಕೋರಿದರು. ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ಸಮಾಜಮುಖಿ ಚಿಂತನೆಯ ಗಣೇಶ್ ಸದಾ ನಗುಮುಖದಿಂದ ಪ್ರತಿಯೊಬ್ಬರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸ್ನೇಹಜೀವಿಯಾಗಿದ್ದು, ನೌಕರರ ಸಂಘದ ಚಟುವಟಿಕೆಗಳಿಗೂ ಸಹಕಾರ ನೀಡಿದ್ದಾರೆ. ಸದಾ ಒಳಿತನ್ನೇ ಬಯಸುವ ಹಾಗೂ ಧನಾತ್ಮಕವಾಗಿಯೇ ಆಲೋಚಿಸುವ ಅವರ ನಡೆ ಆದರ್ಶವಾಗಿದೆ ಎಂದರು.
ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್, ಇಂದು ಸಮಾಜದ ಪ್ರತಿಯೊಂದು ರಂಗದಲ್ಲೂ ಭ್ರಷ್ಟಾಚಾರ ಇದ್ದರೂ, ಅಂತಹ ಸೋಂಕಿನಿಂದ ದೂರವಿದ್ದು ನೂರಾರು ಮಂದಿ ಸ್ನೇಹಿತರನ್ನು ಹೊಂದಿರುವ ಗಣೇಶ್‌ಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಸೂಲೂರು ಗ್ರಾ.ಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಗ್ರಾ.ಪಂ ಸದಸ್ಯ ಶ್ರೀನಿವಾಸಯಾದವ್, ಕಿಲಾರಿಪೇಟೆ ಮಣಿ, ಚಲಪತಿ, ಪತ್ರಕರ್ತ ಕೋ.ನಾ.ಮಂಜುನಾಥ್, ಸೇವಾದಳದ ಬಹುದ್ದೂರ್ ಸಾಬ್ ಮತ್ತಿತರರು ಮಾತನಾಡಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ನೌಕರರ ಸಂಘದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಮುಖಂಡರಾದ ಪಿಡಿಒ ವೆಂಕಟೇಶ್, ಜ್ಯೂಸ್ ನಾರಾಯಣಸ್ವಾಮಿ, ಕೆ.ಯಲ್ಲಪ್ಪ, ಮಾರ್ಜೇನಹಳ್ಳಿ ಬಾಬು, ಕಾರ್ಗಿಲ್ ವೆಂಕಟೇಶ್,ಗಂಗಮ್ಮನಪಾಳ್ಯ ರಾಮಯ್ಯ, , ವೆಂಕಟೇಶ್,ಶ್ರೀರಾಮ್ ಸೇಪತ್ರಕರ್ತರಾದ ಎ.ಜಿ.ಸುರೇಶ್‌ಕುಮಾರ್, ರಾಜೇಂದ್ರ,ವೆಂಕಟೇಶ್‌ಬಾಬಾ,ಚಾಂದ್‌ಪಾಷಾ,ಓಂಕಾರಮೂರ್ತಿ ಹಾಗೂ ಗೋಕುಲ ಮಿತ್ರಬಳಗದ ನೂರಾರು ಸದಸ್ಯರು ಹಾಜರಿದ್ದರು.
