ಉದಯವಾಹಿನಿ, ಮಾಲೂರು : ತಾಲ್ಲೂಕಿನಲ್ಲಿ ಸೆ.೦೬, ೦೭ರಂದು ಅದ್ದೂರಿಯಾಗಿ ಗೌರಿ ಗಣೇಶ ಹಬ್ಬ ಆಚರಣೆ ಹಿನ್ನಲೆಯಲ್ಲಿ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ. ಮೂರ್ತಿಗಳನ್ನು ಈಗಗಲೇ ವ್ಯಾಪಾರಸ್ಥರು ಮುಖ್ಯರಸ್ತೆಯ ಬದಿಗಳಲ್ಲಿ ಪುರಸಭೆ ಪೋಲಿಸ್ ಠಾಣೆಯಲ್ಲಿ ಅನುಮತಿ ಪಡೆದು ಟೆಂಟುಗಳನ್ನು ಹಾಕಿ ಅಂಗಡಿಗಳನ್ನು ಇಟ್ಟಿದ್ದು, ಗೌರಿ ಗಣೇಶ ಮೂರ್ತಿಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿರುವುದರಿಂದ ಹಬ್ಬದ ಸಂಭ್ರಮ ಜೋರಾಗಿದೆ.ಗಣೇಶ ಮೂರ್ತಿಗಳ ತಯಾರಿಕರಿಗೆ ಈ ವರ್ಷ ಹೆಚ್ಚಿನ ಆಧಾಯದ ನಿರೀಕ್ಷೆ ಹೊಂದಿದ್ದಾರೆ. ವರ್ಷದಿಂದ ಗಣೇಶ ಮೂರ್ತಿಗಳನ್ನು ತಯಾರಿಸಿರುವವರಿಗೆ ಈಗಾಗಲೇ ಬಹುತೇಕ ಕಡೆಗಳಲ್ಲಿ ತಯಾರಿಸಿರುವ ವಿವಿಧ ಭಂಗಿಗಳಲ್ಲಿರುವ ಗಣೇಶನ ಮೂರ್ತಿಗಳ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ತಯಾರಕರು ಸಹ ದೊಡ್ಡ ದೊಡ್ಡ ಗಣೇಶನ ಮೂರ್ತಿಗಳಿಗೆ ಕಳೆದ ವರ್ಷಕ್ಕಿಂತ ಬೆಲೆ ಹೆಚ್ಚಾಗಿದೆ. ಅಂತೂ ಈ ವರ್ಷ ಗಣೇಶನ ತಯಾರಿಕರು ಒಳ್ಳೆಯ ಲಾಭಗಳಿಸಲು ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ ೧ ಅಡಿಯಿಂದ ೧೦ ಅಡಿಯವರೆಗೆ ವಿವಿಧ ವಿನ್ಯಾಸಗಳ ಗಣಪತಿ ಮುರ್ತಿಗಳ ಮಾರಟವು ಭರದಿಂದ ಸಾಗಿದೆ. ಮುಕ್ಕಾಲು ಅಡಿ ೨೦೦ ರೂಗಳಿಂದ ೫ ಅಡಿ ೧೦೦೦೦, ೧೦ ಅಡಿಗಳ ವರೆಗಿನ ವಿವಿಧ ರೀತಿಯ ವಿನ್ಯಾಸದ ಗಣಪತಿ ಮೂರ್ತಿಗಳು ಮಾರಾಟವಾಗುತ್ತಿದೆ.
ಮಾಲೂರು ಪಟ್ಟಣದ ಕೃಷ್ಣಬಾಬು ಸೇರಿದಂತೆ ಚಿಕ್ಕತಿರುಪತಿ ಗ್ರಾಪಂ ವ್ಯಾಪ್ತಿಯ ಎಟ್ಟಕೊಡಿ ಗ್ರಾಮದ ಕಾಂತರಾಜ್, ಕೆ.ರಾಮಯ್ಯ, ಎಂ.ವೆಂಕಟೇಶ್, ಆರ್.ಶ್ರೀನಿವಾಸ್, ಕೃಷ್ಣಮೂರ್ತಿ, ಎಂ.ಮುನಿರಾಜ್ ಸೇರಿದಂತೆ ಹಲವು ಕುಟುಂಬದವರು ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿಸಿದ್ದಾರೆ. ಇಲ್ಲಿ ತಯಾರಾಗುವ ಮಣ್ಣಿನ ಗಣಪತಿ ಮೂರ್ತಿಗಳಿಗೆ ರಾಜ್ಯವೂ ಸೇರಿದಂತೆ ಹಲವಾರು ರಾಜ್ಯಗಳಿಂದ ಹೆಚ್ಚಿನ ಬೇಡಿಕೆ ಇರುವುದರಿಂದ ಹಾಗೂ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಈ ವರ್ಷದಲ್ಲಿ ೨ ಲಕ್ಷಕ್ಕೂ ಹೆಚ್ಚಿನ ಮಣ್ಣಿನ ಗಣೇಶನ ಮೂರ್ತಿಗಳು ತಯಾರಾಗಿದ್ದು, ಕೋಟಿ ರೂ.ಗಳ ವ್ಯಾಪಾರ ವಹಿವಾಟು ನಡೆಸಲಾಗಿದೆ.
