ಉದಯವಾಹಿನಿ, ಕೋಲಾರ : ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ,ಜಿಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ೧೮ ಶಿಕ್ಷಕರನ್ನು ನಗದು ಪುರಸ್ಕಾರದೊಂದಿಗೆ ಶಾಸಕ ಕೊತ್ತೂರು ಮಂಜುನಾಥ್ ಸನ್ಮಾನಿಸಿದರು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರೆಂದರೆ ಕೋಲಾರ ತಾಲ್ಲೂಕಿನ ಬಾಲಕಿಯರ ಪಿಯು ಕಾಲೇಜಿನ ಎನ್.ಎಸ್.ಭಾಗ್ಯ, ಬಂಗಾರಪೇಟೆ ತಾಲ್ಲೂಕಿನ ದೊಡ್ಡಚಿನ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಜಿ.ಟಿ.ರಾಮಚಂದ್ರಪ್ಪ, ಕೆಜಿಎಫ್ ತಾಲ್ಲೂಕು ಸುಂದರಪಾಳ್ಯ ಸರ್ಕಾರಿ ಪ್ರೌಢಶಾಲೆಯ ಎನ್.ವಿ.ಪರಮೇಶ್, ಮಾಲೂರು ತಾಲ್ಲೂಕು ಕುಡಿಯನೂರು ಪ್ರೌಢಶಾಲೆಯ ಹೇಮಾವತಿ, ಮುಳಬಾಗಿಲು ತಾಲ್ಲೂಕು ತಾಯಲೂರು ಸರ್ಕಾರಿ ಮಾದರಿ ಹಿರಯ ಪ್ರಾಥಮಿಕ ಶಾಲೆಯ ಡಾ.ಮುಜೀಬ್‌ಖಾನ್, ಶ್ರೀನಿವಾಸಪುರ ತಾಲ್ಲೂಕಿನ ಪಾತಪಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಆರ್.ಲಕ್ಷ್ಮಯ್ಯ ಭಾಜನರಾಗಿದ್ದು, ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
