ಉದಯವಾಹಿನಿ, ಬಳ್ಳಾರಿ: ನಗರದಲ್ಲಿ ಮನೆಗಳಲ್ಲಿ ಪ್ರತಿಷ್ಟಾಪನೆ ಮಾಡಿ ಪೂಜಿಸದ ಗಣೇಶ ವಿಗ್ರಹಗಳ ವಿಸರ್ಜನೆ ಕಾರ್ಯ ತುಂಗಭದ್ರ ಬಲದಂಡೆ ಉಪ ಕಾಲುವೆಯಲ್ಲಿ ನಡೆಯಿತು.
ಮನೆಯಿಂದ ಪೂಜೆಯೊಂದಿಗೆ ತಂದ ಗಣೇಶನನ್ನು ಕಾಲುವೆಯ ಕಟ್ಟೆಯ ಮೇಲಿರಿಸಿ ಮತ್ತೊಮ್ಮೆ ಪೂಜಿಸಿ ನೀರಿನಲ್ಲಿ ಹಾಕಲಾಯ್ತು. ಕೆಲವರು ಪಟಾಕಿ ಸಂಭ್ರಮಿಸಿದರು.
ತಾಳೂರು ರಸ್ತೆಯಲ್ಲಿ ಜನ ಜಗಳು ನಿಯಂತ್ರಿಸಲು ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಐದನೇ ದಿನ ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆ ಮತ್ತು ವಿಸರ್ಜನೆ ನಡೆಯಲಿದೆ.
