ಉದಯವಾಹಿನಿ, ಕೊಪ್ಪಳ: ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ಕೆಲವರು ಆಸೆ ಪಡುತ್ತಿದ್ದಾರೆ. ಆ ಹುದ್ದೆ ಖಾಲಿಯಿಲ್ಲ. ಆದರೆ ಬೇರೆಯವರಿಗೆ ಸಿ.ಎಂ. ಸ್ಥಾನ ಕೊಡುವುದಾದರೆ ನಾನೂ ಆಕಾಂಕ್ಷಿ ಎಂದು ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಮಾಜಿ ಸಂಸದ ಡಿ.ಕೆ. ಸುರೇಶ್ ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿ.ಎಂ. ಸ್ಥಾನ ಕೊಡುವುದಾದರೆ ನಾನೇ ಮುಂಚೂಣಿಯಲ್ಲಿರುವೆ ಎಂದರು.
ಸಿದ್ದರಾಮಯ್ಯ ಮುಂದಿನ ಮೂರೂವರೆ ವರ್ಷ ಸಿ.ಎಂ. ಆಗಿರಬೇಕು. ಆಗಮಾತ್ರರಾಜ್ಯ ಅಭಿವೃದ್ಧಿ ಆಗುತ್ತದೆ. ಅವರೇ ಮುಂದುವರೆಯಬೇಕು ಅಂತ ನಮ್ಮ ಆಸೆಯಿದೆ ಎಂದರು. ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂದು ನಿಮಗೆ ಹೇಳಿದವರು ಯಾರು ಎಂದು ಪ್ರಶ್ನಿಸಿದರು.
ಆರ್.ವಿ. ದೇಶಪಾಂಡೆ ಮುಖ್ಯಮಂತ್ರಿ ಸ್ಥಾನ ಕುರಿತು ನೀಡಿದ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ.ನಾನು ಕೂಡ ಲಿಂಗಾಯತ ನಾಯಕ. ಬಿ.ಆರ್. ಪಾಟೀಲ ಹಾಗೂ ನಾನು ಹಿರಿಯರಿದ್ದೇವೆ. ನಾನು ಸಿಎಂ ಯಾಕೆ ಆಗಬಾರದು, ಲಿಂಗಾಯತ ಸಮುದಾಯಕ್ಕೆ ಕೊಡುವುದಾದರೆ ನನಗೆ ಸ್ಥಾನ ನೀಡಲಿ ಎಂದರು.
