ಉದಯವಾಹಿನಿ, ಕೆ.ಆರ್.ಪುರ : ಗಣೇಶ ಹಬ್ಬ ಏಕತೆ ಮತ್ತು ಭಾವೈಕ್ಯತೆಯ ಸಂಕೇತವಾಗಿದ್ದು ಜಾತಿ ಧರ್ಮಗಳನ್ನು ಮೀರಿದ್ದು ಎಂದು ಜೈ ಶ್ರೀರಾಮ್ ಯುವಕರ ಸಂಘದ ಅಧ್ಯಕ್ಷ ಕುಪ್ಪಿ ಮಂಜುನಾಥ್ ತಿಳಿಸಿದರು.
ಮಹದೇವಪುರ ಕ್ಷೇತ್ರದ ವರ್ತೂರಿನ ಗಾಂಧಿ ವೃತ್ತದಲ್ಲಿ ಜೈ ಶ್ರೀರಾಮ್ ಯುವಕರ ಸಂಘ ಆಯೋಜಿಸಿದ್ದ ೩೩ನೇ ವಿನಾಯಕ ಮಹೋತ್ಸವದ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು, ಗಣೇಶ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ವಿಘ್ನಗಳನ್ನು ನಿವಾರಿಸುವ ಶಕ್ತಿ ಹೊಂದಿದ್ದು ಪ್ರಥಮ ಪೂಜಿತನಾಗಿದ್ದಾನೆ. ಯಾವುದೇ ಭೇಧಭಾವಯಿಲ್ಲದೇ ಭಾವೈಕ್ಯತೆಯಿಂದ ಆಚರಿಸುವ ಜಾತಿ ಧರ್ಮಗಳನ್ನು ಮೀರಿದ ಹಬ್ಬವಾಗಿದೆ ಎಂದರು.
ಗಣೇಶ ಉತ್ಸವವು ೯ ದಿನಗಳ ಕಾಲ ನಡೆಯಲಿದ್ದು, ಪ್ರತಿದಿನ ವಿಶೇಷಪೂಜೆ, ಹೋಮ ಹವನಗಳು ನಡೆಯಲಿದ್ದು, ಸಾವಿರಾರು ಭಕ್ತಾಧಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ, ಪ್ರತಿದಿನ ನೂರಾರು ಜನರಿಗೆ ಅನ್ನಪ್ರಸಾದ ವಿತರಿಸಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!