ಉದಯವಾಹಿನಿ, ಕೋಲಾರ: ಮಲೇಶಿಯಾದ ಕೌಲಾಲಂಪುರ್‌ನ ಶ್ರೀ ಮಹಾಮಾರಿ ಯಮ್ಮನ್ ದೇವಾಲಯದಲ್ಲಿ ನಡೆದ ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಕೋಲಾರದ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಮಕ್ಕಳ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ವಿದೇಶದಲ್ಲಿ ತಮ್ಮ ನೃತ್ಯಪ್ರದರ್ಶನದ ಮೂಲಕ ಅಲ್ಲಿನ ಜನಮನಸೂರೆಗೊಂಡ ಈ ಮಕ್ಕಳನ್ನು ಮಕ್ಕಳನ್ನು ಗೌರವಿಸಿ ಸನ್ಮಾನಿಸಲಾಗಿದ್ದು, ಇವರು ಮತ್ತಷ್ಟು ಉನ್ನತಿ ಸಾಧಿಸಲಿ ತಮ್ಮ ಭಾರತೀಯ ಕಲೆ,ಸಂಸ್ಕೃತಿಯನ್ನು ಎಲ್ಲಾ ಕಡೆಯೂ ಪಸರಿಸಲಿ ಎಂದು ಹಾರೈಸಲಾಗಿದೆ. ಮಲೇಷಿಯಾ ದೇಶದಲ್ಲಿ ನೃತ್ಯ ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಿದ ಸಂದರ್ಭದಲ್ಲಿ ಅವಕಾಶ ಬಳಸಿಕೊಂಡು ಕೋಲಾರದ ಕೀರ್ತಿ ಪತಾಕೆ ಹಾರಿಸಿದ ಕುಮಾರಿ ಎಂ.ಗುಣಪ್ರಿಯ ಅವರಿಗೆ ಅವಕಾಶ ಕಲ್ಪಿಸಿದ ಆಯೋಜಕರಿಗೆ ಹಾಗೂ ಗುರುಗಳಿಗೆ ಪೋಷಕರಾದ ಚಿಕ್ಕತಿರುಪತಿಯ ಮಹೇಶ್ ಧನ್ಯವಾದ ಸಲ್ಲಿಸಿದ್ದಾರೆ.
