ಉದಯವಾಹಿನಿ, ತಾಳಿಕೋಟೆ: ಮಾನವನ ಜೀವನಕ್ಕೆ ಪ್ರಕೃತಿಯು ಸಹಜವಾಗಿಯೇ ಎಲ್ಲವನ್ನು ಒದಗಿಸುತ್ತಾ ಬಂದಿದೆ ಆದರೆ ಮಾನವನು ಪ್ರಕೃತಿಗೆ ದಕ್ಕೆ ತರುವಂತಹ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾನೆ ಸಹಜ ಪ್ರಕ್ರೀಯೇಯ ಮೂಲಕವೇ ಪ್ರಕೃತಿಯು ಮುನಿಸಿಕೊಳ್ಳುವ ಕಾರ್ಯ ಮಾಡುತ್ತದೆ ಅಂತಹ ಸಂದರ್ಬದಲ್ಲಿ ಶರಣರು ಸತ್ಪುರುಷರು ಲೋಕಕಲ್ಯಾಣಾರ್ಥವಾಗಿ ಮೌನಾನುಷ್ಠಾನ ಕೈಗೊಳ್ಳುತ್ತಾ ಸಾಗಿದ್ದಾರೆಂದು ಹುಬ್ಬಳ್ಳಿಯ ಮೂರು ಸಾವಿರದ ಮಠದ ಜಗದ್ಗುರು ಶ್ರೀ ರಾಜಯೋಗ ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಇಂಗಳಗೇರಿ ಗ್ರಾಮದ ಶ್ರೀ ಖಾಸ್ಗತೇಶ್ವರ ಮಠದ ಪೂಜ್ಯನಿ ಶರಣೆ ಶ್ರೀ ಅಕ್ಕಮಹಾದೇವಿ ಅಮ್ಮನವರು ಇಲಕಲ್ಲ ತಾಲೂಕಿನ ಗೊರಬಾಳ ಗ್ರಾಮದ ಸಾಧೂರ ತೋಟದಲ್ಲಿ 31 ದಿನಗಳ ಕಾಲ ಕೈಕೊಂಡ ಮೌನಾನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಸಮಾರಂಭವನ್ನು ದೀಪಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಶ್ರೀ ಖಾಸ್ಗತೇಶ್ವರ ಮಠದ ಪೂಜ್ಯನಿ ಶರಣೆ ಶ್ರೀ ಅಕ್ಕಮಹಾದೇವಿ ಅಮ್ಮನವರು 22 ವರ್ಷಗಳಿಂದ ನಿರಂತರ ಮೌನಾನುಷ್ಠಾನ ಕೈಗೊಳ್ಳುತ್ತಾ ಬಂದಿದ್ದಾರೆ ಅವರು ಕೈಗೊಳ್ಳುವ ಮೌನಾನುಷ್ಠಾನಗಳು ಭಕ್ತಾಧಿಗಳ ಒಳಿತಿಗಾಗಿ ಆಗಿವೆ ಲೋಕ ಕಲ್ಯಾರ್ಣಾವಾಗಿ ಈ ವರ್ಷ 31 ದಿನಗಳ ಕಾಲ ಮೌನ ವೃತಕೈಗೊಂಡು ಭಕ್ತರ ಬೇಡಿಕೆ ಮತ್ತು ರೈತಾಪಿ ಜನರ ಸಂಕಷ್ಟ ಜೀವನ ಒಳಗೊಂಡು ದೇಶದಲ್ಲಿ ಶಾಂತಿ ನೆಲೆಸಲಿ ಸಮೃದ್ದ ರಾಷ್ಟ್ರವಾಗಿ ಬೆಳೆಯಲಿ ಎಂಬ ಸಂದೇಶವನ್ನು ಪರಮಾತ್ಮನಿಗೆ ಸಲ್ಲಿಸಿದ್ದಾರೆಂದರು.

ಪ್ರಕೃತಿಯು ನಮಗೆ ಎಲ್ಲವನ್ನು ಕೊಟ್ಟಿದೆ ಆದರೆ ನಾವು ಪ್ರಕೃತಿಗೆ ಏನನ್ನು ಕೊಟ್ಟಿಲ್ಲಾ ಪ್ರಕೃತಿ ವಿರೂದ್ದವಾಗಿ ನಡೆದುಕೊಳ್ಳುತ್ತಾ ಬಂದಿದ್ದೇವೆ ಹಾಗೆ ಆಗಬಾರದು ನಮ್ಮ ಕೈಲಾದಷ್ಟು ಪ್ರಕೃತಿಯನ್ನು ಕಾಪಾಡುವ ಕಡೆಗೆ ನಮ್ಮ ಹೆಜ್ಜೆ ಇರಬೇಕೆಂದು ಹೇಳಿದ ಜಗದ್ಗುರುಗಳು ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ತಪಸ್ಸಿನ ಶಕ್ತಿ ಈ ನಾಡಿನ ಭಕ್ತರ ಮೇಲೆ ಇರುವದರಿಂದ ಎಲ್ಲವೂ ಸರಿಯಾಗಿ ತೊಟ್ಟಿಲದಲ್ಲಿ ತೂಗೂತಿದೆ ಅಂತಹ ಮಹಾತ್ಮರನ್ನು ನಿತ್ಯ ನೆನೆಯುವದರೊಂದಿಗೆ ಭಕ್ತರು ತಮ್ಮ ಇಷ್ಠಾರ್ಥಗಳನ್ನು ಇಡೇರಿಸಿಕೊಳ್ಳಬೇಕೆಂದರು.

Leave a Reply

Your email address will not be published. Required fields are marked *

error: Content is protected !!