ಉದಯವಾಹಿನಿ, ಕೆ.ಆರ್.ಪುರ: ಬಿಜೆಪಿ ಸದಸ್ಯತ್ವವನ್ನು ಹೆಚ್ಚಾಗಿ ಮಾಡಿಸುವ ಮೂಲಕ ಪಕ್ಷವನ್ನು ಬಲ ಪಡಿಸಬೇಕು ಎಂದು ಕೆ.ಆರ್.ಪುರ ಮಂಡಲ ಅಧ್ಯಕ್ಷ ಮುನೇಗೌಡ ಅವರು ತಿಳಿಸಿದರು.
ಕೆ.ಆರ್.ಪುರ ಸಮೀಪದ ಬೈರತಿಯ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸದಸ್ಯತ್ವ ನೋಂದಣಿಯನ್ನು ಹೆಚ್ಚು ಮಾಡುವುದರಿಂದ ಮಾತ್ರ ಸಂಘಟನೆ ಬಲಿಷ್ಠ ವಾಗಲಿದೆ ಆದ್ದರಿಂದ ಪ್ರತಿಯೊಬ್ಬರು ಸದಸ್ಯತ್ವ ಅಭಿಯಾನದಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುವಂತೆ ನುಡಿದರು.
ಪ್ರತೀ ಬೂತ್ ಗೆ ೩೦೦ ಜನರನ್ನು ಬಿಜೆಪಿ ಸದಸ್ಯತ್ವ ಮಾಡಿಸುವ ಮೂಲಕ ಪಕ್ಷದ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ ಎಂದು ಹೇಳಿದರು.
ಪ್ರತಿ ವಾರ್ಡ್ ನಿಂದ ೧೫ ಸಾವಿರ ಕ್ಕು ಹೆಚ್ಚು ಸದಸ್ಯತ್ವ ಮಾಡಿಸಬೇಕು. ಹಿರಿಯ ಮುಖಂಡ ಬಿ.ಎ.ಗಣೇಶ್,ಕ್ಷೇತ್ರದ ಉಪಾಧ್ಯಕ್ಷ ಗಣೇಶ್ ರೆಡ್ಡಿ, ಕ್ಷೇತ್ರ ಪ್ರಧಾನ ಲೋಕೆಶ್, ಶ್ರೀರಾಮುಲು,ಮುಖಂಡರಾದ ರಮೇಶ್ ಗೌಡ,ಆನಂದ್, ಡಿವಿಎನ್ ಮಂಜುನಾಥ, ಕೃಷ್ಣ, ಮಹೇಶ್ ಇದ್ದರು.
