ಉದಯವಾಹಿನಿ, ಬೆಂಗಳೂರು: ನಾಗಮಂಗಲ ಗಲಾಟೆಗೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್‌‍ ಇನ್ಸ್ ಪೆಕ್ಟರ್‌ ಅಶೋಕ್‌ ಕುಮಾರ್‌ನನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.ಸದಾಶಿವನಗರದ ತಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಮೆರವಣಿಗೆ ಹೊರಡಬೇಕಿದ್ದ ದಾರಿಯನ್ನು ಮುಂಚಿತವಾಗಿ ನೀಡಲಾಗಿತ್ತು. ಇದನ್ನು ಇನ್‌ಸ್ಪೆಕ್ಟರ್‌ ಬದಲಾಯಿಸಿದ್ದರು ಎಂದರು.
ಯಾವುದೇ ಘಟನೆಗಳಾದರೆ ನಿಮನ್ನೇ ಹೊಣೆ ಮಾಡುವುದಾಗಿ ಪೊಲೀಸ್‌‍ ಅಧಿಕಾರಿಗಳಿಗೆ ಮೊದಲೇ ಎಚ್ಚರಿಸಿದ್ದೇವೆ. ಡಿವೈಎಸ್‌‍ಪಿ ಮೇಲೂ ತನಿಖೆ ನಡೆಯುತ್ತಿದೆ. ಘಟನೆಗೆ ಕಾರಣಗಳೇನು ಎಂಬುದರ ಕುರಿತು ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ, ಮುನ್ನೆಚ್ಚರಿಕೆ ವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೆವು. ಅದರ ಆಧಾರದ ಮೇಲೆ ಡಿಜಿ ಯವರು ವೀಡಿಯೋ ಕಾನ್ಫರೆನ್‌್ಸಮೂಲಕ ಸಂಬಂಧಪಟ್ಟ ಎಲ್ಲ ಎಸ್‌‍ಪಿ ಮತ್ತು ಅಧಿಕಾರಿಗಳಿಗೆ ತಿಳಿಸಿದ್ದರು. ಸಾರ್ವಜನಿಕರೊಂದಿಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ, ಎಸ್‌‍ಪಿ ಎಲ್ಲರು ಸಹ ಸಭೆಗಳನ್ನು ನಡೆಸಿದ್ದರು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಕೆಎಸ್‌‍ಆರ್‌ಪಿ ವಾಹನ ಇಟ್ಟುಕೊಂಡು ಸಜ್ಜಾಗಿದ್ದರು ಎಂದರು.ಸರ್ಕಾರದ ಕುಮಕ್ಕು ನೀಡಿದ್ದು, ಇದು ಪೂರ್ವನಿಯೋಜಿತ ಘಟನೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ಸರ್ಕಾರದವರಾದರೂ ಹೋಗಿ ಗಲಾಟೆ ಮಾಡಿ ಎಂದು ಹೇಳುತ್ತಾರೆಯೇ? ಈ ರೀತಿ ಆಗಬಾರದಾಗಿತ್ತು ಎಂದು ಹೇಳುವುದೇ ತಪ್ಪ. ಇವರಿಗೆ ಕನ್ನಡ ಭಾಷೆ ಅರ್ಥವಾಗುವುದಿಲ್ಲವೇ? ನಾವು ಹಳ್ಳಿಯಿಂದ ಬಂದವರು, ಹಳ್ಳಿ ಭಾಷೆಯಲ್ಲಿ ಹೇಳುತ್ತೇವೆ.

 

Leave a Reply

Your email address will not be published. Required fields are marked *

error: Content is protected !!