ಉದಯವಾಹಿನಿ, ಹನೂರು : ತಾಲ್ಲೂಕಿನ ಮಾರ್ಟಳ್ಳಿಯ ಪಾಳಿಮೇಡು ಗ್ರಾಮದಲ್ಲಿ ಸಂತ ಆರೋಗ್ಯ ಮಾತೆಯ ಹಬ್ಬವನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಕಳೆದ 9 ದಿನಗಳಿಂದ ನವೇನ ದಿವ್ಯ ಬಳಿಪೂಜೆ ತೇರಿನ ಮೆರವಣಿಗೆ ನಡೆಯಿತು.

ಆಡಂಬರದ ದಿವ್ಯ ಬಳಿಪೂಜೆ ವಂ.ಸ್ವಾಮಿ ಜಾನ್ ಪಾಲ್ ರವರಿಂದ ನೆರವೇರಿಸಲಾಯಿತು. ರಾತ್ರಿ ಭವ್ಯ ತೇರಿನ ಮೆರವಣಿಗೆ ಮಾಡುವ ಮೂಲಕ ಕ್ರೈಸ್ತರು ಸಂಭ್ರಮಿಸಿದರು.ವಿಶೇಷವಾಗಿ ಹೂಗಳಿಂದ ಶೃಂಗರಿಸಲ್ಪಟ್ಟ ಭವ್ಯತೇರನ್ನು ಊರಿನ ಸುತ್ತಮುತ್ತ ಮೆರವಣಿಗೆ ಮಾಡಲಾಯಿತು. ಈ ವೇಳೆ ಭಕ್ತಾದಿಗಳು ಪ್ರಾರ್ಥನೆ ಹಾಗೂ ಸ್ತುತಿಗೀತೆಗಳನ್ನು ಹಾಡಿದರು.ಧರ್ಮ ಕೇಂದ್ರದ ಗುರುಗಳು ಮತ್ತು ಇನ್ನಿತರ ಗುರುಗಳು ಹಾಗೂ ನೂರಾರು ಭಕ್ತ ಸಮೂಹ ಜನರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!