ಉದಯವಾಹಿನಿ,ಮಂಡ್ಯ, : ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ವ್ಯಕ್ತಿಯೊಬ್ಬ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಟಿಕ್‌ಟಾಕ್ ಮೂಲಕ ಅಣಕಿಸಿ ವಿಡಿಯೋ ಮಾಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಗೂ ಮುನ್ನ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಮಾದರಿಯಂತೆ ಉಚಿತ ವಿದ್ಯುತ್ ಬಗ್ಗೆ ತಾಲೂಕಿನ ಕೆರಗೋಡು ಗ್ರಾಮದ ವ್ಯಕ್ತಿಯೊಬ್ಬರು ಮಾಡಿರುವ ಟಿಕ್‌ಟಾಕ್ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.ಕರೆಂಟ್ ಬಿಲ್ ಕಟ್ಟಿ ಎಂದು ಸೆಸ್ಕಾಂ ಸಿಬ್ಬಂದಿ ಹೋದ ಸಮಯದಲ್ಲಿ ವ್ಯಕ್ತಿಯೊಬ್ಬ ಸಿದ್ದರಾಮಯ್ಯ ರೀತಿಯಲ್ಲೇ ಡೈಲಾಗ್ ಹೇಳಲಾರಂಭಿಸಿದ್ದು, ಮಹದೇವಪ್ಪ ಕರಂಟ್ ನಿಂಗೂ ಫ್ರೀ, ನಂಗೂ ಫ್ರೀ ಎನ್ನುತ್ತಲೇ ಟಿಕ್‌ಟಾಕ್ ಮಾಡುವ ಮೂಲಕ ಗಮನ ಸೆಳೆದಿದ್ದಾನೆ.
ಇದರಿಂದ ವಿದ್ಯುತ್ ಬಿಲ್ ವಸೂಲಿಗೆ ಹೋದ ಸೆಸ್ಕ್ ಸಿಬ್ಬಂದಿ ಸಿದ್ದರಾಮಯ್ಯ ರೀತಿ ಡೈಲಾಗ್ ಹೊಡೆಯುವ ವ್ಯಕ್ತಿಯನ್ನು ಕಂಡು ಪೇಚಿಗೆ ಸಿಲುಕಿದ್ದಾರೆ. ಕರಂಟ್ ಬಿಲ್ ಕಟ್ಟಣ್ಣ ಎಂದು ಸೆಸ್ಕಾಂ ಸಿಬ್ಬಂದಿ ಕೇಳಿದರೆ, ಕರಂಟ್ ಬಿಲ್ ಕೇಳಿದರೆ ನಿಮ್ಮನ್ನೇ ಕಟ್ಟಿ ಹಾಕುತ್ತೇನೆ ಎಂದು ವ್ಯಕ್ತಿ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ.
