ಉದಯವಾಹಿನಿ, ಬೆಂಗಳೂರು: ಸುರ್ಜೇವಾಲಾ ನನ್ನನ್ನು ಸಭೆಗೆ ಕರೆದಿಲ್ಲ, ಸಂಪುಟದಿಂದ ಕೈ ಬಿಡ್ತಾರೆ ಅಂತನೂ ಹೇಳಿಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪುರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುರ್ಜೇವಾಲಾ ನನ್ನನ್ನು ಸಭೆಗೆ ಕರೆದಿಲ್ಲ, ನನ್ನನ್ನು ಸಂಪುಟದಿಂದ ಕೈಬಿಡ್ತಾರೆ ಅಂತನೂ ಹೇಳಿಲ್ಲ, ಕೆಲವು ಮಂತ್ರಿಗಳನ್ನೂ ಕೈಬಿಟ್ಟಿದ್ದೀರಲ್ಲ ಯಾಕೆ ಎಂದು ನೀವೇ ಸುರ್ಜೇವಾಲಾರನ್ನು ಕೇಳಿ. ಉಳಿದವರ ಬಗ್ಗೆ ನಾನೇನು ಹೇಳಲಿ? ಹೈಕಮಾಂಡ್ ಏನಾದರೂ ಕರೆದರೆ ತಕ್ಷಣ ಹೋಗುತ್ತೇವೆ ಎಂದು ಹೇಳಿದರು.
