ಉದಯವಾಹಿನಿ, ಶ್ರವಣಬೆಳಗೊಳ: ಇತಿಹಾಸ ಪ್ರಸಿದ್ಧ ಭಂಡಾರ ಬಸದಿಯ ಹರಿಪೀಠದಲ್ಲಿ ವಿರಾಜಮಾನರಾಗಿ ಖಡ್ಗಾಸದಲ್ಲಿರುವ ಚವ್ವೀಸ ತೀರ್ಥಂಕರರಿಗೆ ಏಕಕಾಲದಲ್ಲಿ ಕಲ್ಪಧ್ರುಮ ಮಹಾಭಿಷೇಕ ಮತ್ತು ಹುಳ್ಳ ಸಭಾ ಮಂಟಪದಲ್ಲಿ ದಶ ಧರ್ಮಗಳ ದಶ ಲಕ್ಷಣ ಮಹಾಪರ್ವವು ಶ್ರದ್ಧಾ ಭಕ್ತಿ ಪೂರ್ವಕವಾಗಿ ಸಂಪನ್ನಗೊಂಡಿತು.

10 ದಿನಗಳ ಕಾಲ ಜರುಗಿದ ಅದ್ದೂರಿಯ ಧರ್ಮ ಪ್ರಭಾವನೆಯ ಸ್ಮರಣೀಯ ಕಾರ್ಯಕ್ರಮವು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನ ಮತ್ತು ಚಾತುರ್ಮಾಸ್ಯ ಆಚರಿಸಿದ ತ್ಯಾಗಿಗಳ ಸಮ್ಮುಖದಲ್ಲಿ ನೆರವೇರಿತು.
ದಶ ಧರ್ಮಗಳಾದ ಉತ್ತಮ ಕ್ಷಮಾ, ಉತ್ತಮ ಮಾರ್ಧವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ, ಉತ್ತ,ಮ ಬ್ರಹ್ಮಚರ್ಯ ಧರ್ಮಗಳ ದಶ ಲಕ್ಷಣ ಮಹಾಪರ್ವವು ಮಹತ್ವಪೂರ್ಣವಾಗಿದೆ. ಇದನ್ನು ಜೈನ ಧರ್ಮೀಯರು ರಾಜ ಪರ್ವವೆಂದು ಕರೆಯುತ್ತಾರೆ.
ಕ್ಷೇತ್ರದಲ್ಲಿ ವರ್ಷಾಯೋಗ ಚಾತುರ್ಮಾಸ್ಯ ಆಚರಿಸುತ್ತಿರುವ ಅನುಪಮಕೀರ್ತಿ ಮಹಾರಾಜ್, ದಿವ್ಯಸಾಗರ ಮಹಾರಾಜ್, ಕ್ಷುಲ್ಲಕ ಮಲ್ಲಿಸಾಗರ ಮಹಾರಾಜ್, ಆರ್ಯಿಕಾ ನಿರ್ಮಲಮತಿ ಮಾತಾಜಿ ಸೇರಿದಂತೆ ಇತರೆ ತ್ಯಾಗಿಗಳ, ವಿದ್ವಾಂಸರಿಂದ ಇಲ್ಲಿನ ಹುಳ್ಳ ಸಭಾ ಮಂಟಪದಲ್ಲಿ ದಶ ಲಕ್ಷಣ ಪರ್ವದ ದಶ ಧರ್ಮಗಳ ಕುರಿತು ಪ್ರವಚನ, ಪರಸ್ಪರ ಕ್ಷಮಾವಾಣಿ, ಆಚರಿಸುವುದರೊಂದಿಗೆ 10 ಧರ್ಮಗಳ ದಶ ಲಕ್ಷಣ ಮಹಾಪರ್ವ ಗುರುವಾರ ಮುಕ್ತಾಯವಾಯಿತು.

Leave a Reply

Your email address will not be published. Required fields are marked *

error: Content is protected !!