ಉದಯವಾಹಿನಿ, ಕುಕನೂರು: ತಾಲ್ಲೂಕಿನ ವರ್ತಕರು ರೈತರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಕುಕನೂರ ಬಂದ್‍ಗೆ ಕರೆ ಕೊಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಿ.ಆರ್ ನಾರಾಯಣರಡ್ಡಿ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರು ವತಿಯಿಂದ ಮಂಗಳವಾರ ಬೃಹತ್ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿ ಧರಣಿ ಉದ್ದೇಶಿಸಿ ಮಾತನಾಡಿದರು.
ವರ್ತಕರು ಎಪಿಎಂಸಿಯಲ್ಲಿ ಟೆಂಡರ್ ಪ್ರಕ್ರಿಯೆ ಮಾಡಬೇಕು, ಪ್ಲಾಸ್ಟಿಕ್ ಚೀಲ ಬಿಟ್ಟು ಕಾಟನ್ ಚೀಲದಲ್ಲಿ ತೂಕಮಾಡಬೇಕು, ವರ್ತಕರು ಹೊರಗಡೆ ವ್ಯಾಪಾರ ಬಂದ್ ಮಾಡಬೇಕು, ರೈತರಿಂದ ಹಮಾಲರು ಒತ್ತಡಹಾಕಿ ಯಾವುದೇ ಧಾನ್ಯಗಳನ್ನು ತುಂಬಬಾರದು ಎಂದರು. ತಾಲ್ಲೂಕ ಅಧ್ಯಕ್ಷ ಮಂಜುನಾಥ ಚೆಟ್ಟಿ, ನಗರ ಘಟಕದ ಅಧ್ಯಕ್ಷ ಗವಿಸಿದ್ದಪ್ಪ ಜೆನಿನ, ಭರಮಪ್ಪ ತಳವಾರ, ದೇವಪ್ಪ ಸೋಬಾನದ್, ಬಸವರಾಜ ಸಬರದ್, ಶಿವಪ್ಪ ಸಂದಿಮನಿ, ಹನುಮಂತಪ್ಪ ಮರಡಿ, ಹನುಮಂತಪ್ಪ ಪಲ್ಲೆದ್, ಬಸಪ್ಪ ಮಂಡಲಗೇರಿ, ವೀರಯ್ಯ ಕಳ್ಳಿಮಠ, ಶರಣಯ್ಯ ಕೋಮಾರ, ಕಳಕಪ್ಪ ಕ್ಯಾದಗುಂಪಿ, ರಾಮಣ್ಣ ಯಡ್ಡೋಣಿ, ಕಾಶೀಮಅಲಿ ಸಂಗಟಿ, ಸಾವಿತ್ರಮ್ಮ, ವಜೀರ್‍ಸಾಬ ತಳಕಲ್ ಇದ್ದರು.

Leave a Reply

Your email address will not be published. Required fields are marked *

error: Content is protected !!